ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ ಹಿರಿಯ ವಿಜ್ಞಾನಿ ರಾಜೀವ್ ಬಹ್ಲ್ ಅವರನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ನೂತನ ಮಹಾನಿರ್ದೇಶಕರನ್ನಾಗಿ ಸರ್ಕಾರ ಶುಕ್ರವಾರ ನೇಮಿಸಿದೆ.
ಬಹ್ಲ್ ಅವರು ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ತಾಯಿ, ನವಜಾತ ಶಿಶು, ಮಗು ಮತ್ತು ಹದಿಹರೆಯದವರ ಆರೋಗ್ಯ ಕುರಿತು ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿದ್ದಾರೆ.