ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಇಂಧನ ಬೆಲೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ತಿಂಗಳ 1ನೇ ತಾರೀಖಿನಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ತೈಲ ಕಂಪೆನಿಗಳು ಪರಿಷ್ಕರಿಸುತ್ತವೆ. ಅದೇ ರೀತಿ ಸೆ.1 ಬೆಲೆ ಪರಿಷ್ಕರಣೆ ಆಗಿದೆ.
ಇಂಡಿಯನ್ ಆಯಿಲ್ ಬಿಡುಗಡೆ ಮಾಡಿದ ಬೆಲೆಗಳ ಪ್ರಕಾರ 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು 100 ರೂಪಾಯಿವರೆಗೆ ಕಡಿಮೆ ಮಾಡಲಾಗಿದೆ. ಸಿಲಿಂಡರ್ ದರ ದೆಹಲಿಯಲ್ಲಿ ರೂ 91.50, ಕೋಲ್ಕತಾದಲ್ಲಿ ರೂ 100, ಮುಂಬೈನಲ್ಲಿ ರೂ 92.50 ಮತ್ತು ಚೆನ್ನೈನಲ್ಲಿ ರೂ 96 ರಷ್ಟು ಅಗ್ಗವಾಗಿದೆ.
ಈ ಮೂಲಕ ದೆಹಲಿಯಲ್ಲಿ ನಿನ್ನೆಯವರೆಗೆ ಇದ್ದ 1976.50 ರೂ. ಈಗ 1885 ರೂಪಾಯಿಗೆ ಇಳಿಕೆಯಾಗಿದೆ. ಕೋಲ್ಕತಾದಲ್ಲಿ 2095.50 ರಿಂದ 1995.50 ಕ್ಕೆ ಬೆಲೆ ಇಳಿದಿದೆ. ಮುಂಬೈನಲ್ಲಿ 1936.50 ರಿಂದ 1844 ಹಾಗೂ ಚೆನ್ನೈನಲ್ಲಿ ರೂ.2141 ಬದಲಿಗೆ 2045 ರೂಪಾಯಿಗೆ ಇಳಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ 2,063.50 ರೂಪಾಯಿ ಇದೆ.
14.2 ಕೆಜಿ ಗೃಹಬಳಕೆಯ ಸಿಲಿಂಡರ್‌ಗಳ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೆಂಗಳೂರಿನಲ್ಲಿ ಗೃಹ ಬಳಕೆ ಎಲ್ಪಿಜಿ ದರ 1055.50 ರೂಪಾಯಿಯಿದೆ. ದೆಹಲಿಯಲ್ಲಿ ಇದರ ಬೆಲೆ 1053 ರೂ, ಕೋಲ್ಕತಾದಲ್ಲಿ 1079 ರೂ, ಮುಂಬೈನಲ್ಲಿ 1052.50 ಮತ್ತು ಚೆನ್ನೈನಲ್ಲಿ 1068.50ನಲ್ಲಿ ಇದ್ದು ಅವುಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ.