ಬದಿಯಡ್ಕ: ಕೇರಳ ರಾಜ್ಯ ಕನ್ನಡ ಬರಹಗಾರರ ಸಂಘದ ನೇತೃತ್ವದಲ್ಲಿ ಓಣಂ ಆಚರಣೆ ನೀರ್ಚಾಲು ಮಹಾಜನ ಸಂಸ್ಕøತ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ನಡೆಯಿತು.
ಓಣಂ ಹಬ್ಬದ ಆಚರಣೆ ಸಂದರ್ಭದಲ್ಲಿ ರಚಿಸಲಾದ ಹೂವಿನ ರಂಗೋಲಿಯನ್ನು ದೀಪ ಬೆಳಗಿಸಿ ಮಹಾಜನ ಸಂಸ್ಕೃತ ಕಾಲೇಜು ಹಿರಿಯ ಮಾಧ್ಯಮಿಕ ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಉದ್ಘಾಟಿಸಿ ಶುಭಹಾರೈಸಿದರು.
ಕೇರಳ ರಾಜ್ಯ ಕನ್ನಡ ಬರಹಗಾರರ ಸಂಘದ ಅಧ್ಯಕ್ಷ ಜಿ.ವೀರೇಶ್ವರ ಕರ್ಮರ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಪ್ರಥಮವಾಗಿ ನಾಡ ಹಬ್ಬ ಆಚರಿಸುವ ಮೂಲಕ ಬರಹಗಾರರ ಸಂಘದ ವೇದಿಕೆಯ ಪ್ರಥಮ ಕಾರ್ಯಕ್ರಮ ಇದಾಗಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಶಿಕ್ಷಕಿ ವಾಣಿ ಟೀಚರ್ ಹಾಗೂ,ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ ಶುಭಹಾರೈಸಿದರು.
. ಬಳಿಕ ಮಕ್ಕಳಿಂದ ಹಾಗೂ ಸಂಘದ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ಸಮೂಹ ಗಾಯನ, ಗೀತಗಾಯನ, ಭಜನೆ, ಚಿತ್ರರಚನೆ ಹಾಗೂ ಸಿನೆಮಾ ಹಾಗೂ ಇತರ ಹಾಡನ್ನು ಜೋಡಿಸಿ ಜೀವನ ಚರಿತ್ರೆ, ಹಾಸ್ಯ ಹೊನಲು ಇತ್ಯಾದಿ ಕಾರ್ಯಕ್ರಮಗಳು ಜರುಗಿದವು. ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಕೆದ್ಲಾಯರು ಸ್ವಾಗತಿಸಿ, ಶೈಲಜಾ ಎ.ವಂದಿಸಿದರು. ಸುಶೀಲಾ ಪದ್ಯಾಣ ಕಾರ್ಯಕ್ರಮ ನಿರೂಪಿಸಿದರು.
ಕಲಾಧ್ಯಾಪಕ ಜಯಪ್ರಕಾಶ್ ಶೆಟ್ಟಿ ಬೇಳ ಅವರ ಚಿತ್ರರಚನೆಯು ಪ್ರೇಕ್ಷಕರ ಮನ ಸೂರೆಗೊಂಡಿತು.
ಕೇರಳ ರಾಜ್ಯ ಕನ್ನಡ ಬರಹಗಾರರ ಸಂಘದಿಂದ ಓಣಂ ಆಚರಣೆ
0
ಸೆಪ್ಟೆಂಬರ್ 11, 2022