ಎರ್ನಾಕುಐಂ: ಕಮ್ಯುನಿಸ್ಟರಿಗೆ ಕಮ್ಯುನಿಸಂ ಎಂದರೇನು ಎಂಬುದು ಗೊತ್ತಿಲ್ಲ ಎಂದು ಚಿತ್ರನಟಿ ಸಾಧಿಕಾ ವೇಣುಗೋಪಾಲ್ ಹೇಳಿದ್ದಾರೆ.
ಅಂತಹ ಪರಿಸ್ಥಿತಿಯನ್ನು ನಾವು ಇಂದು ಎದುರಿಸುತ್ತಿದ್ದೇವೆ. ಕೇರಳ ಪ್ರವಾಹದಿಂದ ತತ್ತರಿಸಿದಾಗ ನನಗೆ ಅದು ಅರಿವಾಯಿತು ಎಂದು ಸಾಧಿಕಾ ಹೇಳಿರುವರು. ನಿನ್ನೆ ಕೇರಳದ ಜನಂ ಟಿವಿಗೆ ನೀಡಿದ ಸಂದರ್ಶನದಲ್ಲಿ ನಟಿ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಪ್ರವಾಹ ಸಂತ್ರಸ್ತರಿಗೆ ನೀಡಬೇಕಾಗಿದ್ದ ಹಲವು ಸಾಮಾಗ್ರಿಗಳನ್ನು ಜನರಿಗೆ ತಲುಪಿಸದೆ ಪಕ್ಷದ ಕಾರ್ಯಕರ್ತರ ಮನೆಗೆ ಮುಖಂಡರು ಕೊಂಡೊಯ್ಯುವುದನ್ನು ತಾನು ಕಣ್ಣಾರೆ ನೋಡಿದ್ದೆ. ಶಿಬಿರಗಳಿಗೆ ತಲುಪಬೇಕಿದ್ದ ಅತ್ಯಾವಶ್ಯಕ ಸರಕುಗಳನ್ನು ಇತರ ಗೋಡೌನ್‍ಗಳಿಗೆ ಮತ್ತು ಅಗತ್ಯವಿಲ್ಲದ ಜನರಿಗೆ ವಿತರಿಸಿರುವುದನ್ನು ತಾನು ಖಚಿತವಾಗಿ ಬಲ್ಲೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಾಯಕರು ಇಂತಹ ಕ್ರಮಗಳಿಂದ ಸ್ವಂತ ಪಕ್ಷದವರಿಗೂ ಅನ್ಯಾಯವಾಗಿದೆ ಎಂದು ಸಾಧಿಕಾ ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ವಿಚಾರಗಳಿಗೆ ಪ್ರತಿಕ್ರಿಯಿಸುವಾಗ ಟೀಕೆಗಳನ್ನೂ ಎದುರಿಸಬೇಕಾಗುತ್ತದೆ. ಆ ಟೀಕೆಗಳನ್ನು ನಿರ್ಲಕ್ಷಿಸುವೆ. ತನಗೆ ಭಾರತೀಯಳಾಗಿರುವುದು ಎಂದಿಗೂ ಹೆಮ್ಮೆಯ ವಿಚಾರ. ಸಾರ್ವಜನಿಕರ ಗಮನ ಸೆಳೆಯಲು ರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಿದಾಗ ಕೆಲವರು ಪ್ರತಿಕ್ರಿಯಿಸುತ್ತಾರೆ. ಭಾರತವನ್ನು ರಾಜಕೀಯವಾಗಿ ನೋಡುವ ವಿಷಯವಲ್ಲ. ಇದು ದೇಶ ಪ್ರೇಮ ಎಂದೂ ಸಾಧಿಕಾ ಹೇಳಿದ್ದಾರೆ.
ಕಮ್ಯುನಿಸ್ಟರಿಗೂ ಕಮ್ಯುನಿಸಂ ಎಂದರೇನು ಎಂದು ತಿಳಿದಿಲ್ಲ: ನಟಿ ಸಾಧಿಕಾ ವೇಣುಗೋಪಾಲ್
0
ಸೆಪ್ಟೆಂಬರ್ 10, 2022
Tags