ಕಾಸರಗೋಡು: ಕೇಂದ್ರ ಸರ್ಕಾರದಿಂದ ಕೇರಳ ಸರ್ಕಾರ ತನ್ನ ಅಧೀನಕ್ಕೆ ಪಡೆದುಕೊಂಡಿರುವ ಕಾಸರಗೋಡು ಮೂಲದ ಕೆಲ್ ಇಎಂಎಲ್ ಸಂಸ್ಥೆಯ ನೂತನ ವ್ಯವಸ್ಥಾಪಕ ನಿರ್ದೇಶಕ ಯಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೇರಳ ಸರ್ಕಾರ ವಿ.ಕೃಷ್ಣಕುಮಾರ್ ಅವರನ್ನು ನೇಮಕ ಮಾಡಿದೆ. ಒಂದು ವರ್ಷಕ್ಕೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲಾಗಿದೆ.
ಕೆಲ್ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಸಂಯೋಜಿಸಿಕೊಂಡು, ಸಂಸ್ಥೆಯನ್ನು ಪ್ರಗತಿಯ ಪಥದತ್ತ ಕೊಂಡೊಯ್ಯಲು ಸಹಾಯವಾಗುವ ನಿಟ್ಟಿನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಇಎಲ್-ಇಎಂಎಲ್‍ನಲ್ಲಿ ಘಟಕ ಮುಖ್ಯಸ್ಥರ ನೇಮಕ ಮಾಡಲು ಸರ್ಕಾರ ತೀರ್ಮಾನಿÂಸಿತ್ತು. ಈ ನಿಟ್ಟಿನಲ್ಲಿ, ಕೈಗಾರಿಕ ಇಲಾಖೆ ಪ್ರಧಾನ ಕಾರ್ಯದರ್ಶಿ (ಎರಡು) ರಿಯಾಬ್ ಅಧ್ಯಕ್ಷರು ಮತ್ತು ಕೆಇಎಲ್ ವ್ಯವಸ್ಥಾಪಕ ನಿರ್ದೇಶಕರು ಸದಸ್ಯರಾಗಿರುವ ಶೋಧನಾ ಸಮಿತಿಯನ್ನು ರಚಿಸಲಾಗಿದೆ. ಶೋಧನಾ ಸಮಿತಿಯ ಶಿಫಾರಸ್ಸು ಆಧರಿಸಿ ಸರ್ಕಾರ ವಿ.ಕೃಷ್ಣಕುಮಾರ್ ಅವರನ್ನು ಎಂ ಡಿ ಆಗಿ ನೇಮಿಸಿ ಆದೇಶ ಹೊರಡಿಸಿದೆ.
ಕೆಲ್-ಇಎಂಎಲ್ ಎಂಡಿಯಾಗಿ ವಿ ಕೃಷ್ಣಕುಮಾರ್ ನೇಮಕ
0
ಸೆಪ್ಟೆಂಬರ್ 14, 2022