ನವದೆಹಲಿ: ಹೊಸ ಪ್ರಕರಣಗಳ ಪಟ್ಟಿ ವ್ಯವಸ್ಥೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ನಡುವಿನ ಯಾವುದೇ ಭಿನ್ನಾಭಿಪ್ರಾಯವನ್ನು ಸಿಜೆಐ ಯುಯು ಲಲಿತ್ ಗುರುವಾರ ತಳ್ಳಿ ಹಾಕಿದ್ದಾರೆ ಮತ್ತು 'ಎಲ್ಲ ನ್ಯಾಯಾಧೀಶರು ಒಂದೇ ಅಭಿಪ್ರಾಯ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಸಿಜೆಐ ಲಲಿತ್, ನಾವು ಪಟ್ಟಿ ಮಾಡಲು ಹೊಸ ಮಾರ್ಗವನ್ನು ತೆಗೆದುಕೊಂಡಿದ್ದೇವೆ. ವರದಿ ಸರಿಯಾದ ಸ್ಥಿತಿಯಲ್ಲಿ ಇಲ್ಲ. ಎಲ್ಲಾ ನ್ಯಾಯಾಧೀಶರು ಸಂಪೂರ್ಣವಾಗಿ ಒಂದೇ ಅಭಿಪ್ರಾಯ ಹೊಂದಿದ್ದಾರೆ. ಹೊಸ ಪಟ್ಟಿ ವ್ಯವಸ್ಥೆ ಪ್ರಗತಿಯಲ್ಲಿದೆ. ಇದು ಪರಿಚಯಿಸಿದಾಗಿನಿಂದ 5,200 ಪ್ರಕರಣಗಳನ್ನು ಇತ್ಯರ್ಥಪಡಿಸಿರುವ ಭರವಸೆಯಿದೆ ಎಂದು ಅವರು ವಿವರಿಸಿದರು.
ಹೊಸ ಪಟ್ಟಿ ವ್ಯವಸ್ಥೆಯು ವಿಚಾರಣೆಗೆ ನಿಗದಿಪಡಿಸಿದ ವಿಷಯಗಳನ್ನು ತೆಗೆದುಕೊಳ್ಳಲು ಸಾಕಷ್ಟು ಸಮಯವನ್ನು ನೀಡುವುದಿಲ್ಲ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಬುಧವಾರ ಟೀಕಿಸಿದ್ದರು. ಮಧ್ಯಾಹ್ನ' ಅಧಿವೇಶನದ ಅವಧಿಯಲ್ಲಿ ಹಲವಾರು ವಿಷಯಗಳಿರುವುದರಿಂದ ಅನೇಕ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಲ್ಲ ಎಂದು ನ್ಯಾಯಮೂರ್ತಿ ಅಭಯ್ ಓಕಾ ಅವರನ್ನೊಳಗೊಂಡ ಪೀಠವು ಹೇಳಿದೆ.
ಸಿಜೆಐ ಹುದ್ದೆ ವಹಿಸಿಕೊಂಡ ನಂತರ, ವಿವಿಧ ದಿನಗಳಲ್ಲಿ ಉನ್ನತ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ಲಲಿತ್ ಪರಿಚಯಿಸಿದ ಬದಲಾವಣೆಗಳಲ್ಲಿ ಒಂದಾಗಿದೆ.