HEALTH TIPS

ಚಂದ್ರಗಿರಿ ಕೋಟೆ ಕಲರ್ ಫುಲ್ ಆಗಲು ಸಿದ್ಧತೆ: ನಿರ್ವಹಣೆ ಡಿಟಿಪಿಸಿಗೆ ವಹಿಸುವ ಸಾಧ್ಯತೆ


   ಕಾಸರಗೋಡು: ಪ್ರಾಚೀನ ತುಳುನಾಡಿನ ಆಡಳಿತ ಸ್ವರೂಪದ ಮೂಲ ಸಂರಚನೆಗಳಲ್ಲಿ ಕೋಟೆಗಳು ಮಹತ್ತರವಾದುದು.  ಈ ಪೈಕಿ ಕೋಟೆಗಳ ನಾಡು ಉತ್ತರ ಕೇರಳದಲ್ಲಿ ಕಾಲದ ಮೂಕ ಸಾಕ್ಷಿಗಳಾಗಿರುವ ಕೋಟೆಗಳ ರಕ್ಷಣೆಗೆ ಹೊಸ ಯೋಜನೆಗಳು ಸಿದ್ದಗೊಂಡಿವೆ.  ವಿಶ್ವವಿಖ್ಯಾತ ಬೇಕಲಕೋಟೆಯ ಸಮಗ್ರ ಉನ್ನತೀಕರಣದ ಭಾಗವಾಗಿ ಕಾಸರಗೋಡು ನಗರ ಸಮೀಪದ ಚಂದ್ರಗಿರಿ ಕೋಟೆಯನ್ನೂ ಉನ್ನತೀಕರಿಸುವ ನಿಟ್ಟಿನಲ್ಲಿ ಚಿಂತನೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಪುರಾತತ್ವ ಇಲಾಖೆಯ ಪ್ರಧಾನ ಕಛೇರಿಯಲ್ಲಿ ಈ ಕುರಿತು ಚರ್ಚೆಗಳು ನಡೆದಿವೆ.
    ಉತ್ತರ ಕೇರಳದ ಕೋಟೆಗಳನ್ನು ಮನರಂಜನಾ ಉದ್ದೇಶಗಳಿಗೆ ಉಪಯುಕ್ತವಾಗಿಸುವ ಉದ್ದೇಶದಿಂದ ಪುರಾತತ್ವ ಇಲಾಖೆ ನಿರ್ದೇಶಕ ದಿನೇಶನ್ ಈ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಅನುμÁ್ಠನದ ಜವಾಬ್ದಾರಿಗಳನ್ನು ಹಸ್ತಾಂತರಿಸುವ ಮೊದಲು, ಮೂಲಸೌಕರ್ಯ ನಿರ್ದೇಶಕರು ಡಿಟಿಪಿಸಿ ಕಾರ್ಯದರ್ಶಿಗಳಿಂದ  ವಿವರವಾದ ಯೋಜನಾ ವರದಿಯನ್ನು ಕೇಳಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಚರ್ಚೆ ಹಾಗೂ ಒಮ್ಮತದ ಬಳಿಕ ಪ್ರವಾಸೋದ್ಯಮ ಇಲಾಖೆಯಿಂದ ಸಚಿವ ಮಟ್ಟದ ನಿರ್ಧಾರ ಕೈಗೊಳ್ಳಲಾಗುವುದು. ಸಂರಕ್ಷಿತ ಸ್ಮಾರಕವಾಗಿರುವುದರಿಂದ ಕೋಟೆಯ ಮಾಲೀಕತ್ವವನ್ನು ಪುರಾತತ್ವ ಇಲಾಖೆಯೇ ಉಳಿಸಿಕೊಳ್ಳಲಿದ್ದು,  ದಿನನಿತ್ಯದ ನಿರ್ವಹಣೆಯನ್ನು ಮಾತ್ರ ಡಿಟಿಪಿಸಿಗೆ ನೀಡಲಾಗುವುದು. ಯಾವುದೇ ತಾಂತ್ರಿಕ ತೊಂದರೆಗಳು ಉಂಟಾಗುವುದಿಲ್ಲ ಎಂದು ಅಂದಾಜಿಸಲಾಗಿದೆ.



ಚಂದ್ರಗಿರಿ ಕೋಟೆ:
ಚಂದ್ರಗಿರಿ ಕೋಟೆ ಚಂದ್ರಗಿರಿ ನದಿಯ ಪಕ್ಕದಲ್ಲಿಯೇ ಕಟ್ಟಲಾಗಿದೆ. ಇದೊಂದು ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು ತೆಂಗು ಕಂಗುಗಳ ಸೊಬಗು ಸುತ್ತಲೂ ಆವರಿಸಿದೆ. ಅಲ್ಲದೇ ಅರೇಬಿಯನ್ ಸಮುದ್ರವೂ ಕೂಡಾ ಇಲ್ಲಿ ಅತ್ಯಂತ ರಮಣೀಯವಾಗಿ ಗೋಚರವಾಗುತ್ತದೆ. ಇಲ್ಲಿನ ಪಶ್ಚಿಮ ದಿಕ್ಕಿಗೆ ಬಂದರೆ ಅದ್ಭುತವಾದ ಸೂರ್ಯಾಸ್ತವನ್ನು ನೋಡಬಹುದು. ಚಂದ್ರಗಿರಿ ಕೋಟೆಯು ಶಿವಪ್ಪ ನಾಯ್ಕ ನಿಂದ 17 ನೇ ಶತಮಾನದಲ್ಲಿ ಕಟ್ಟಲಾಯಿತು. ಈ ಕೋಟೆಯು ತನ್ನದೇ ಆದ ವಿಶೇಷ ಇತಿಹಾಸವನ್ನು ಹೊಂದಿದೆ. ನೂರು ವರ್ಷಗಳ ಹಿಂದೆ, ಚಂದ್ರಗಿರಿ ನದಿಯು ಕೊಳತುನಾಡು ಹಾಗೂ ತುಳುನಾಡು ಈ ಎರಡು ಸಾಮ್ರಾಜ್ಯಗಳ ಗಡಿ ಪ್ರದೇಶವಾಗಿತ್ತು. ಈ ಎರಡು ಸಾಮ್ರಾಜ್ಯಗಳೂ ಅತ್ಯಂತ ಬಲಶಾಲಿಯಾಗಿದ್ದವು.
ಯಾವಾಗ ವಿಜಯನಗರದ ದೊರೆ ತುಳುನಾಡನ್ನು ತನ್ನ ವಶಕ್ಕೆ ತೆಗೆದುಕೊಂಡನೋ ಅಂದಿನಿಂದ ಚಂದ್ರಗಿರಿಯು ವಿಜಯವಗರಕ್ಕೆ ಸೇರಿತು.16 ನೇ ಶತಮಾನದ ಹೊತ್ತಿಗೆ ವಿಜಯನಗರದ ದೊರೆ ತನ್ನ ಶಕ್ತಿಯನ್ನು ಕಳೆದುಕೊಂಡಿದ್ದ. ನಂತರ ಚಂದ್ರಗಿರಿಯು ಸ್ವತಂತ್ರಗೊಂಡು ರಕ್ಷಣೆಗಾಗೆ ಚಂದ್ರಗಿರಿ ಕೋಟೆಯನ್ನು ನಿರ್ಮಿಸಲಾಯಿತು. ತದನಂತರ ಈ ಕೋಟೆಯು ಹೈದರಲಿ (ಹೈರದ್ ಅಲಿ) ಯ ಕೈಸೇರಿತು. ಕೊನೆಗೆ ಬ್ರಿಟಿμï ಇಸ್ಟ್ ಇಂಡಿಯಾ ಕಂಪನಿ ಈ ಕೋಟೆಯನ್ನು ತನ್ನದಾಗಿಸಿಕೊಂಡಿತು. ಇದೀಗ ಈ ಚಂದ್ರಗಿರಿ ಕೋಟೆ ಪ್ರಾಚ್ಯಶಾಸ್ತ್ರ ಇಲಾಖೆಯವರಿಂದ ಸಂರಕ್ಷಿಸಲ್ಪಡುತ್ತಿದೆ.
ಕೇಂದ್ರ ಪುರಾತತ್ವ ಇಲಾಖೆಯ ಸಂರಕ್ಷಿತ ಸ್ಮಾರಕವಾಗಿರುವ ಬೇಕಲ ಕೋಟೆಯ ನಂತರ, ಚಂದ್ರಗಿರಿ ಕೋಟೆಯು ಕಾಸರಗೋಡು ಜಿಲ್ಲೆಯಲ್ಲಿ ಅತ್ಯಂತ ಹಳೆಯ ಪುರಾತತ್ವ ಅಸ್ತಿತ್ವವನ್ನು ಹೊಂದಿದೆ. ಕಾಸರಗೋಡು-ಕಾಞಂಗಾಡ್ ರಾಜ್ಯ ಹೆದ್ದಾರಿಯ ಸಮೀಪವಿರುವ ಈ ಕೋಟೆಯನ್ನು ಕೇರಳ ಸರ್ಕಾರವು ನವೀಕರಿಸಿದೆ.
ಇದೀಗ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಅನುಕೂಲಕರ ಪರಿಸ್ಥಿತಿಗಳನ್ನು ಹೊಂದಿರುವುದರಿಂದ ಸ್ಪಷ್ಟ ಯೋಜನೆ ಮೂಲಕ ಪ್ರವಾಸಿಗರ ನೆಚ್ಚಿನ ಐತಿಹಾಸಿಕ ಸ್ಮಾರಕವನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಬೋವಿಕ್ಕಾನ ಸಮೀಪದ ಪೊವ್ವಲ್ ಕೋಟೆ, ಕುಂಬಳೆ ಮತ್ತು ಹೊಸದುರ್ಗದ ಕೋಟೆ ಸೇರಿದಂತೆ ಕೋಟೆಗಳನ್ನು ಸಹ ನಂತರ ಈ ರೀತಿಯಲ್ಲಿ ಅಭಿವೃದ್ದಿಗೊಳಿಸಿ ಹಸ್ತಾಂತರಿಸುವ ಯೋಜನೆ ಪುರಾತತ್ವ ಇಲಾಖೆಯಲ್ಲಿದೆ.
ಪುರಾತತ್ವ ಇಲಾಖೆಯ ಅಡಿಯಲ್ಲಿ ಕೇರಳದಲ್ಲಿ ಸುಮಾರು 153 ಕೋಟೆಗಳಿವೆ. ಇವುಗಳ ಸಂಪೂರ್ಣ ನವೀಕರಣ ಸಹಿತ ಇತರ ಚಟುವಟಿಕೆಗಳನ್ನು ಮುಂದುವರಿಸಲು ಆರ್ಥಿಕ ಹೊರೆ ಹೆಚ್ಚಳಗೊಳ್ಳುವುದರಿದ ಇದೀಗ ಸರ್ಕಾರ ಕೋಟೆಗಳನ್ನು ನವೀಕರಣಗೊಳಿಸಿ ನಿರ್ವಹಣೆಯನ್ನು ಡಿಟಿಪಿಸಿಯಂತಹ ಪ್ರವಾಸೋದ್ಯಮ ಏಜೆನ್ಸಿಗಳೊಂದಿಗೆ ಮುನ್ನಡೆಸಲು ಉತ್ಸುಕವಾಗಿದೆ. ಈಗಾಗಲೇ ಕೇರಳದ ಕೆಲವು ಕೋಟೆಗಳು ಈರೀತಿಯ ವ್ಯವಸ್ಥೆಯಡಿ ನಿರ್ವಹಿಸಲ್ಪಡುತ್ತಿದೆ.   


               ನಾವು ಟೆಂಡರ್ ಕರೆದಿರುವ ಉತ್ತರ ಕೇರಳದ ಕೆಲವು ಕೋಟೆಗಳ ಸಂರಕ್ಷಣೆಗೆ ಏಜೆನ್ಸಿಗಳ ಮೂಲಕ ಕಾಡು-ಪೊದರುಗಳನ್ನು ಕಡಿಯುವುದು, ಸ್ವಚ್ಛತೆಯಂತಹ ನವೀಕರಣಗಳು ನಡೆಯುತ್ತಿವೆ. ಚಂದ್ರಗಿರಿ ಕೋಟೆಯನ್ನು ಡಿಟಿಪಿಸಿಗೆ ಹಸ್ತಾಂತರಿಸುವ ಕುರಿತು ವಿವರವಾದ ಚರ್ಚೆಗಳನ್ನು ನಡೆಸಲಾಗುವುದು. ಶೀಘ್ರದಲ್ಲೇ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ. ಈ ಪ್ರಯೋಗ ಬೇರೆಡೆ ಯಶಸ್ವಿಯಾಗಿದೆ.
        - ದಿನೇಶನ್ (ನಿರ್ದೇಶಕರು, ರಾಜ್ಯ ಪುರಾತತ್ವ ಇಲಾಖೆ)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries