ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಹೊರಾಟ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಶನಿವಾರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಸೈಫುಲ್ಲ ತಂಙಳ್ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿದರು. ಕುಂಜತ್ತೂರು ಹಾಗೂ ಉದ್ಯಾವರ 10ನೇ ಮೈಲಿನಲ್ಲಿ ಅಂಡರ್ ಪಾಸ್, ಶಿಕ್ಷಣ ಸಂಸ್ಥೆಗಳಿರುವ ಸ್ಥಳದಲ್ಲಿ ಫುಟ್ ಓವರ್ ಬ್ರಿಡ್ಜ್, ಸರ್ವೀಸ್ ರಸ್ತೆ ಕಾಮಗಾರಿ ಮೊದಲು ಮುಗಿಸಿ, ಆಟೋರಿಕ್ಷಾ, ಜೀಪ್, ಟ್ಯಾಕ್ಸಿ ನಿಲ್ದಾಣ, ಬಸ್ ವೇಟಿಂಗ್ ಶೆಲ್ಟರ್ ಹಾಗೂ ಫುಟ್‍ಪಾತ್ ನಿರ್ಮಿಸಬೇಕು ಎಂದು ರ್ಯಾಲಿಯಲ್ಲಿ ಒತ್ತಾಯಿಸಲಾಯಿತು.
ತೂಮಿನಾಡಿನಿಂದ ಶುರುವಾದ 10ನೇ ಮೈಲಿನಲ್ಲಿ ಕೊನೆಗೊಂಡ ಪ್ರತಿಭಟನಾ ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಶಾಸಕ ಎ.ಕೆ.ಎಂ.ಅಶ್ರಫ್, ಪಂಚಾಯಿತಿ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ, ಉಪಾಧ್ಯಕ್ಷ ಅಬೂಬಕರ್ ಸಿದ್ದೀಕ್, ಎಸ್.ಎಂ.ಬಶೀರ್, ಸಂಜೀವ ಶೆಟ್ಟಿ, ದಯಾಕರ ಮಾಡ, ಪಂಚಾಯತಿ ಸದಸ್ಯರಾದ ಲಕ್ಷ್ಮಣನ್, ರಹೀಂ, ನಸ್ರತ್ ಜಹಾನ್, ಹೊರಾಟ ಸಮಿತಿ ಪದಾಧಿಕಾರಿಗಳಾದ ಅಶ್ರಫ್ ಬಡಾಜೆ, ಜಬ್ಬಾರ್ ಪದಾವು, ಹಸೈನಾರ್ ಸೆವೆನ್‍ಸ್ಟಾರ್, ರಝಾಕ್ ಚಕ್ಕೂರ್, ಅಶ್ರಫ್ ಕುಂಜತ್ತೂರು, ಹನೀಫ್ ಕುಚ್ಚಿಕ್ಕಾಡ್ ಮೊದಲಾದವರು ನೇತೃತ್ವ ನೀಡಿದ್ದರು.
ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯೊಂದಿಗೆ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧನಿದ್ದೇನೆ ಎಂದು ಶಾಸಕ ಎಕೆಎಂ ಆಶ್ರಫ್ ಬಹಿರಂಗವಾಗಿ ಘೋಷಿಸಿದರು.
ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯಿಂದ ತೂಮಿನಾಡಿನಲ್ಲಿ ಬೃಹತ್ ರ್ಯಾಲಿ
0
ಸೆಪ್ಟೆಂಬರ್ 11, 2022
Tags