ಕಾಸರಗೋಡು: ಕೇರಳದಲ್ಲಿ ಸಾಮಾಜಿಕ ಪರಿವರ್ತನೆಗೆ ಹಾದಿಮಾಡಿಕೊಟ್ಟಿರುವ ನವೋತ್ಥಾನ ನಾಯಕ ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜನ್ಮ ದಿನಾಚರಣೆ ಕರಂದಕ್ಕಾಡು ಶ್ರೀ ನಾರಾಯಣಗುರು ಮಂದಿರದಲ್ಲಿ ಜರುಗಿತು.
ಬೆಳಗ್ಗೆ ಶ್ರೀಗಣಪತಿ ಹೋಮ, ಕುತ್ಯಾಳ ಶ್ರೀ ಅನ್ನಪೂರ್ಣೇಶ್ವರೀ ಭಜನಾಮಂಡಳಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಆಚಾರ್ಯ ಗುರುಪ್ರಸಾದ್ ಅವರ ನೇತೃತ್ವದಲ್ಲಿ ಶ್ರೀಗುರುಪೂಜೆ ನಡೆಯಿತು. ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಎ.ಕೇಶವ, ಮಾಜಿ ಅಧ್ಯಕ್ಷ ರಘು ಮೀಪುಗುರಿ, ಕಾರ್ಯದರ್ಶಿ ಕಮಲಾಕ್ಷ ಸುವರ್ಣ, ಜಯಶೀಲ, ಸುಕೀರ್ತಿ, ಮೈಂದಪ್ಪ, ಚಂದ್ರಕಲಾ, ರೋಹಿಣಿ, ವೀಣಾಮೈಂದಪ್ಪು, ಮಹಿಳಾ ಘಟಕ ಪದಾಧಿಕಾರಿಗಳಾದ ಲೀಲಾಮಣಿ, ರೋಹಿಣಿ, ಜಯಂತ, ಸಂತೋಷ್, ಕುಡ್ಲು ಘಟಕ ಕಾರ್ಯದರ್ಶಿ ರವಿ ಕೆ. ಪ್ರೇಮ್‍ಜಿತ್, ಶಮ್ಮಿಕುಮಾರ್ ಉಪಸ್ಥಿತರಿದ್ದರು.
ಕರಂದಕ್ಕಾಡಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ
0
ಸೆಪ್ಟೆಂಬರ್ 12, 2022