ಕಾಸರಗೋಡು: ಉನ್ನತ ಶಿಕ್ಷಣ ಮುಗಿಸಿ ಆರ್ಥಿಕ ಸಂಕಷ್ಟದಿಂದಾಗಿ ವಿದೇಶದಲ್ಲಿ ದುಡಿಯುವ ಕನಸನ್ನು ನನಸಾಗಿಸಲು ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ವತಿಯಿಂದ ವಿದೇಶಿ ಉದ್ಯೋಗಕ್ಕೆ ಧನ ಸಹಾಯ ಯೋಜನೆ ಜಾರಿಗೆ ಮುಂದಾಗಿದೆ. ವಿದೇಶಿ ಉದ್ಯೋಗಕ್ಕೆ ಆರ್ಥಿಕ ನೆರವು ನೀಡುವ ಈ ಯೋಜನೆಯು ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರು ಮತ್ತು ಯುವಕರಿಗೆ ವಿದೇಶದಲ್ಲಿ ಕೆಲಸ ಹುಡುಕಲು ಸಹಾಯ ಮಾಡಲಿದೆ.
ಯೋಜನೆಯನ್ವಯ ವಿದೇಶದಲ್ಲಿ ಉದ್ಯೋಗ ಪಡೆಯಲು ಯಾವುದೇ ಕೆಲಸದ ಕ್ಷೇತ್ರದಲ್ಲಿ ಕೌಶಲ್ಯ ಮತ್ತು ತರಬೇತಿಯನ್ನು ಪಡೆದವರಿಗೆ ಪ್ರಯಾಣ ಮತ್ತು ವೀಸಾ ಸಂಬಂಧಿತ ವೆಚ್ಚಗಳಿಗೆ 1 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ಇಲಾಖೆ ಒದಗಿಸಲಿದೆ. ಜಿಲ್ಲೆಯಲ್ಲಿ ಪ್ರಸ್ತುತ23 ಮಂದಿ ಈ ಸವಲತ್ತು ಪಡೆದಿದ್ದಾರೆ. 2019-2020 ನೇ ಸಾಲಿನಲ್ಲಿ 10 ಜನರು ಈ ಯೋಜನೆಯ ಪ್ರಯೋಜನಗಳನ್ನು ಪಡೆದಿದ್ದಾರೆ. ಕೋವಿಡ್ ಕಾಲಾನಂತರದ ವರ್ಷದಲ್ಲಿ ಕೆಲಸಕ್ಕಾಗಿ ವಿದೇಶಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯು ತುಲನಾತ್ಮಕವಾಗಿ ಕಡಿಮೆಯಾಗಿದೆ. 2021-22 ನೇ ಸಾಲಿನಲ್ಲಿ 5 ಜನರಿಗೆ ಈ ನೆರವನ್ನು ನೀಡಲಾಗಿದೆ. ಮೊತ್ತವನ್ನು ಎರಡು ಕಂತುಗಳಲ್ಲಿ ನೀಡಲಾಗುವುದು. ಮೊದಲ ಹಂತದಲ್ಲಿ 60,000 ರೂಪಾಯಿ ಮತ್ತು ಎರಡನೇ ಹಂತದಲ್ಲಿ 40,000 ರೂಪಾಯಿ ನೀಡಲಾಗುವುದು.
ಅರ್ಜಿದಾರರು 20 ರಿಂದ 50 ವರ್ಷದೊಳಗಿನವರಾಗಿದ್ದು ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು. ಮೊತ್ತವನ್ನು ಫಲಾನುಭವಿಯ ಬ್ಯಾಂಕ್ ಖಾತೆಯ ಮೂಲಕ ಪಾವತಿಸಲಾಗುವುದು. ನಿಯಮಾನುಸಾರವಾಗಿ ಪಡೆದ ಪಾಸ್‍ಪೆÇೀರ್ಟ್ ಮತ್ತು ವೀಸಾದ ಧೃಡೀಕೃತ ಪ್ರತಿಗಳೂಂದಿಗೆ ಅರ್ಜಿ ಸಲ್ಲಿಸಿದರೆ ಟಿಕೆಟ್ ಮೊತ್ತ ಸೇರಿದಂತೆ 60 ಶೇಕಡಾ ಮುಂಗಡ ವಾಗಿ ನೀಡಲಾಗುವುದು. ಅಲ್ಲದೆ, ಉಳಿದ 40 ಶೇಕಡಾವನ್ನು ಉದ್ಯೋಗ ಒಪ್ಪಂದದ ಪ್ರಕಾರ ಉದ್ಯೋಗಕ್ಕೆ ಹಾಜರಾದ ದಾಖಲೆಯ ಮೇಲೆ ನೀಡಲಾಗುವುದು. ವಿದೇಶದಲ್ಲಿ ಉದ್ಯೋಗ ಹುಡುಕುವ ಉದ್ದೇಶದಿಂದ ಹೋಗುವ ಯಾತ್ರೆಗೆ ಮಾತ್ರ ಈ ಯೋಜನೆಯ ಪ್ರಯೋಜನ ದೊರೆಯಲಿರುವುದು. ಅವುಗಳ ಪ್ರಯೋಜನ ಪಡೆಯಬೇಕೆಂದು ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ಅಧಿಕಾರಿ ಎಸ್.ಮೀನಾರಾಣಿ ಹೇಳಿದ್ದಾರೆ.
ವಿದೇಶಿ ಉದ್ಯೋಗಕ್ಕೆ ತೆರಳುವ ಪ.ಜಾತಿ ಸಮುದಾಯದ ಜನತೆಗೆ ಹಣಕಾಸು ನೆರವು
0
ಸೆಪ್ಟೆಂಬರ್ 23, 2022