ಕಾಸರಗೋಡು: ಮಾದಕ ವ್ಯಸನದ ವಿರುದ್ಧ ವಿಮುಕ್ತಿ ಜಿಲ್ಲಾ ಮಟ್ಟದ ಸಭೆ ನಡೆಸಲಾಯಿತು. ಕಾಸರಗೋಡು ಕಲೆಕ್ಟರೇಟ್ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಕ್ಷೇಮ ಸ್ಥಾಯೀ ಸಮಿತಿ ಅಧ್ಯಕ್ಷ ಶಿನೋಜ್ ಚಾಕೋ ವಹಿಸಿದ್ದರು. ಎಡಿಎಂ ಎ.ಕೆ.ರಾಮೇಂದ್ರನ್, ಅಬಕಾರಿ ಉಪ ಆಯುಕ್ತ ಡಿ.ಬಾಲಚಂದ್ರನ್, ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಕೆ.ವಿ.ಪುμÁ್ಪ, ಸಹಾಯಕ ಅಬಕಾರಿ ಆಯುಕ್ತ ಕೆ.ಕೃಷ್ಣಕುಮಾರ್, ವಿಮುಕ್ತಿ ಮಿಷನ್ ಜಿಲ್ಲಾ ಸಂಯೋಜಕ ಹರಿದಾಸನ್ ಪಾಲಕಲ್, ಎನ್.ಜಿ.ರಘುನಾಥನ್ ಮಾತನಾಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ಸೇವನೆ ಸಂಪೂರ್ಣ ನಿರ್ಮೂಲನೆಯಾಗಬೇಕು. ಜಿಲ್ಲೆಯು ಭೀಕರ ಪರಿಸ್ಥಿತಿಯಲ್ಲಿ ಸಾಗುತ್ತಿದ್ದು, ಅದಕ್ಕಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಭೆ ಸೂಚಿಸಿತು. ಒಂದಿಬ್ಬರು ಮಕ್ಕಳಿಂದ ಮಾದಕ ವ್ಯಸನದ ಸಮಸ್ಯೆ ಶುರುವಾಗಿದೆ ಎಂದು ಸಭೆ ನಿರ್ಣಯಿಸಿತು. ರಾಜಕೀಯ ಪಕ್ಷದ ಮುಖಂಡರಾದ ಕೆ.ಆರ್.ಜಯಾನಂದ, ಬಿಜು ಉಣ್ಣಿತ್ತಾನ್, ಗ್ರಂಥಾಲಯ ಪರಿಷತ್ ಸದಸ್ಯ ಇ.ಜನಾರ್ದನನ್, ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್, ಕುಟುಂಬಶ್ರೀ ಎಡಿಎಂಸಿ ಪ್ರಕಾಶನ ಪಾಳಾಯಿ, ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಎಸ್.ಮೀನಾರಾಣಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ವಿಮುಕ್ತಿಯ ಭಾಗವಾಗಿ ರಾಜ್ಯ, ಜಿಲ್ಲೆ, ಪಂಚಾಯತ್, ವಾರ್ಡ್ ಮತ್ತು ಶಾಲೆಗಳಂತಹ ವಿವಿಧ ಹಂತಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಸಭೆಯಲ್ಲಿ ಜಿಲ್ಲಾಡಳಿತ ಮತ್ತು ಅಬಕಾರಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಾದಕ ವ್ಯಸನದ ಪಿಡುಗಿನ ವಿರುದ್ಧ ತಯಾರಾದ ‘ಎಚ್ಚರ’ ಹಾಸ್ಯಮಯ ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ಸುಭಾμï ವನಶ್ರೀ ಅವರ ಕಥೆಯನ್ನು ಪಿಎ ರಾಮಚಂದ್ರನ್ ನಾಟಕವಾಗಿಸಿದ್ದಾರೆ. ವಿನು ನಾರಾಯಣನ್ ಚಿತ್ರದ ನಿರ್ದೇಶಕರು.
ವಿಮುಕ್ತಿ: ಜಿಲ್ಲಾ ಮಟ್ಟದ ಸಭೆ
0
ಸೆಪ್ಟೆಂಬರ್ 30, 2022