ಮುಳ್ಳೇರಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಾಸರಗೋಡು ಇದರ ಮಾರ್ಗದರ್ಶನದಲ್ಲಿ ಕಾರಡ್ಕ ವಲಯದ ಮುಳ್ಳೇರಿಯ, ಮವ್ವಾರು,
ಕಾರಡ್ಕ ಗಾಡಿಗುಡ್ಡೆ ಕುಂಟಾರು, ಮಣಿಯೂರು, ದೇಲಂಪಾಡಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮುಳ್ಳೇರಿಯದಲ್ಲಿ ಇತ್ತೀಚೆಗೆ ನಡೆಯಿತು.
ರವಿಶ ತಂತ್ರಿ ಕುಂಟಾರು ಸಮಾರಂಭ ಉದ್ಘಾಟಿಸಿ ಭಾರತೀಯ ಸಂಸ್ಕøತಿಯನ್ನು ಉಳಿಸುವ ಕೈಂಕರ್ಯ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಾಕಾರಗೊಳ್ಳುತ್ತಿದೆ. ಗ್ರಾಮೀಣ ಜನರ ಸರ್ವತೋಮುಖ ಅಭಿವೃದ್ಧಿಗೆ, ನೆಮ್ಮದಿಯ ಜೀವನ ನಡೆಸಲು ಗ್ರಾಮಾಭಿವೃದ್ಧಿ ಸಹಕಾರಿಯಾಗಿದೆ. ಒಕ್ಕೂಟದ ಪದಾಧಿಕಾರಿಗಳಿಗೆ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಪ್ರಗತಿ ಬಂಧು ಸ್ವಸಹಾಯ ಸಂಘಗಳ ಮವ್ವಾರು ಒಕ್ಕೂಟದ ಅಧ್ಯಕ್ಷ ಕೊರಗಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ನಿರ್ದೇಶಕ ಪ್ರವೀಣ್ ಕುಮಾರ್ ಪದಗ್ರಹಣ ನೆರವೇರಿಸಿ ಮಾಹಿತಿ ಮಾರ್ಗದರ್ಶನ ಜೊತೆಗೆ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಅಶ್ವತ್ ಪೂಜಾರಿ ಲಾಲ್ ಭಾಗ್, ನಜಾಗೃತಿ ವೇದಿಕೆಯ ಕಾರಡ್ಕ ವಲಯ ಅಧ್ಯಕ್ಷ ಸಂಜೀವ ಶೆಟ್ಟಿ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮುಳ್ಳೇರಿಯ ಘಟಕಾಧ್ಯಕ್ಷ ಗಣೇಶ್ ವತ್ಸ, ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯರಾದ ಬಾಲಕೃಷ್ಣ ರೈ, ನಾರಾಯಣ ಮಾಟೆ, ರಾಮಯ್ಯ ರೈ ಹಾಗೂ ಎಂಟು ಒಕ್ಕೂಟದ ನಿರ್ಗಮಿತ ಪದಾಧಿಕಾರಿಗಳು ಮತ್ತು ನೂತನ ಪದಾಧಿಕಾರಿಗಳು ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಮುಖೇಶ್ ಸ್ವಾಗತಿಸಿ, ಸೇವಾ ಪ್ರತಿನಿಧಿ ಚಂದ್ರಕಲಾ ವಂದಿಸಿದರು. ವಲಯ ಮೇಲ್ವಿಚಾರಕ ಅನಿಲ್ ಕುಮಾರ್ ಪಿ ನಿರೂಪಿಸಿದರು. ಭಾಸ್ಕರ ಮಲ್ಲಾವರ ಪ್ರಾರ್ಥಿಸಿದರು. ಸೇವಾ ಪ್ರತಿನಿಧಿ ರೇಣುಕಾ ವರದಿ ಮಂಡಿಸಿದರು.
ಕಾರಡ್ಕ ವಲಯ, ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ
0
ಸೆಪ್ಟೆಂಬರ್ 29, 2022
Tags