HEALTH TIPS

ತುಂಬು ಗರ್ಭಿಣಿಗೆ ರೈಲಿನಲ್ಲೇ ಹೆರಿಗೆ ಮಾಡಿಸಿದ ವೈದ್ಯಕೀಯ ವಿದ್ಯಾರ್ಥಿನಿ

 

          ಹೈದರಾಬಾದ್: ಸಿಕಂದರಾಬಾದ್ ಮತ್ತು ವಿಶಾಖಪಟ್ಟಣದ ನಡುವೆ ಚಲಿಸುತ್ತಿದ್ದ ರೈಲಿನಲ್ಲಿ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯೊಬ್ಬರಿಗೆ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಹೆರಿಗೆ ಮಾಡಿಸಿದ್ದಾರೆ.

             ಗೀತಂ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ಸ್ವಾತಿ ರೆಡ್ಡಿ(23), ಗರ್ಭಿಣಿಯ ನೆರವಿಗೆ ಧಾವಿಸಿದ್ದಾರೆ.

              ಮಧ್ಯರಾತ್ರಿ 1.30ರ ಸುಮಾರಿಗೆ ಸ್ವಾತಿ, ವಿಜಯವಾಡ ಬಳಿ ಸಿಕಂದರಾಬಾದ್ ಮತ್ತು ವಿಶಾಖಪಟ್ಟಣ ಎಕ್ಸ್‌ಪ್ರೆಸ್ ರೈಲು ಹತ್ತಿದ್ದರು. ಎಸಿ ಕೋಚ್‌ಗೆ ಪ್ರವೇಶಿಸಿದಾಗ ಅಲ್ಲಿ ಶ್ರೀಕಾಕುಳಂ ಜಿಲ್ಲೆಯ 30 ವರ್ಷದ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಗರ್ಭಿಣಿ ಜೊತೆಗಿದ್ದ ಕುಟುಂಬ ಸದಸ್ಯರು ನೆರವಿಗಾಗಿ ಮನವಿ ಮಾಡುತ್ತಿದ್ದದ್ದನ್ನು ಗಮನಿಸಿದರು.


            ಈ ಸಂದರ್ಭ ವಿದ್ಯಾರ್ಥಿನಿ ಸ್ವಾತಿ, ಗರ್ಭಿಣಿಯ ನೆರವಿಗೆ ಧಾವಿಸಿದ್ದಾರೆ. ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆಯಂಟಿಸೆಪ್ಟಿಕ್ ಬಿಟ್ಟು ಯಾವುದೇ ವೈದ್ಯಕೀಯ ಉಪಕರಣಗಳಿಲ್ಲದೆ ಸ್ವಾತಿ ಹೆರಿಗೆ ಮಾಡಿಸಿದ್ದಾರೆ.

              ಈ ನಡುವೆ ಟಿಕೆಟ್ ಪರೀಕ್ಷಕರು ಮುಂದಿನ ಅನಾಕಪಲ್ಲಿ ನಿಲ್ದಾಣದಲ್ಲಿ ವೈದ್ಯಕೀಯ ವ್ಯವಸ್ಥೆ ಮಾಡಿಸಿದ್ದರು. ರೈಲು ಬರುವ ಮುನ್ನವೇ ಆಗಮಿಸಿದ್ದ ಆಂಬುಲೆನ್ಸ್ ಮೂಲಕ ತಾಯಿ ಮತ್ತು ಮಗುವನ್ನು ಎನ್‌ಟಿಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

               ವೈದ್ಯಕೀಯ ವಿದ್ಯಾರ್ಥಿನಿ ಸ್ವಾತಿ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Tweet

Conversation

Student of GITAM deemed to be university's medical college, Dr Swati, an intern conducted a delivery on a moving train and delivered a healthy baby girl. The grateful parents named the baby after her. Kudos to Swati, well done..

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries