HEALTH TIPS

ಸೀಟ್‌ ಬೆಲ್ಟ್‌ ಧರಿಸುವ ಬಗ್ಗೆ ನಾಗರಿಕರಲ್ಲಿ ಜಾಗೃತಿ: ನಿತಿನ್‌ ಗಡ್ಕರಿ

 

            ನವದೆಹಲಿ: 'ಕಾರು ಚಾಲನೆ ವೇಳೆ ಸೀಟ್‌ ಬೆಲ್ಟ್‌ ಧರಿಸುವುದರ ಮಹತ್ವವನ್ನು ನಾಗರಿಕರಿಗೆ ಮನದಟ್ಟು ಮಾಡಿಸುವುದಕ್ಕಾಗಿ ಜಾಗೃತಿ ಅಭಿಯಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇದರಲ್ಲಿ ಕ್ರಿಕೆಟಿಗರು ಹಾಗೂ ಬಾಲಿವುಡ್‌ ನಟರನ್ನು ತೊಡಗಿಸಿಕೊಳ್ಳಲಾಗುತ್ತದೆ' ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

            ಟಾಟಾ ಸನ್ಸ್‌ನ ಮಾಜಿ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಅವರು ಭಾನುವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಗಡ್ಕರಿ ಅವರು ರಸ್ತೆ ಸುರಕ್ಷತೆ ಕ್ರಮಗಳ ಕುರಿತು ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.

                'ಎಲ್ಲಾ ಕಾರುಗಳೂ ಆರು ಏರ್‌ ಬ್ಯಾಗ್‌ ಹೊಂದುವುದನ್ನು ಕಡ್ಡಾಯಗೊಳಿಸಲು ಸಾರಿಗೆ ಸಚಿವಾಲಯ ಚಿಂತಿಸಿದೆ. ಸೀಟ್‌ ಬೆಲ್ಟ್‌ ಧರಿಸದ ಪ್ರಯಾಣಿಕರನ್ನು ಎಚ್ಚರಿಸಲು ಒಂದು ಬಗೆಯ ಶಬ್ದ ಹೊರಹೊಮ್ಮುವ ವ್ಯವಸ್ಥೆ ಕಾರುಗಳಲ್ಲಿತ್ತು. ಆ ಶಬ್ದ ನಿಯಂತ್ರಿಸುವ ಸಾಧನವೊಂದನ್ನು ಕಾರುಗಳಲ್ಲಿ ಬಳಸಲಾಗುತ್ತಿತ್ತು. ಅದರ ಉತ್ಪಾದನೆಯನ್ನು ಈಗಾಗಲೇ ನಿಷೇಧಿಸಲಾಗಿದೆ' ಎಂದು ಹೇಳಿದ್ದಾರೆ.

             'ಹಿಂಬದಿಯಲ್ಲಿ ಕೂರುವವರು ಸೀಟ್ ಬೆಲ್ಟ್‌ ಧರಿಸುವ ಅಗತ್ಯವಿಲ್ಲ ಎಂಬ ಭಾವನೆ ಜನರಲ್ಲಿದೆ. ಅದು ತಪ್ಪು. ಕಾರಿನ ಮುಂಬದಿ ಹಾಗೂ ಹಿಂಬದಿಯಲ್ಲಿ ಕೂರುವವರು ಸೀಟ್‌ ಬೆಲ್ಟ್‌ ಧರಿಸಬೇಕು' ಎಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries