ಕೊಚ್ಚಿ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಎರ್ನಾಕುಳಂ ಜಿಲ್ಲೆಗೆ ಪ್ರವೇಶಿಸುವ ಮುನ್ನವೇ ಪಕ್ಷದ ಕ್ಷೇತ್ರದ ಅಧ್ಯಕ್ಷರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಕಾಂಗ್ರೆಸ್‍ಗೆ ಭಾರಿ ಹೊಡೆತ ನೀಡಿದೆ.
ಎರ್ನಾಕುಳಂ ಸೆಂಟ್ರಲ್ ಮಂಡಲ ಅಧ್ಯಕ್ಷ ರಾಧಾಕೃಷ್ಣನ್ ಪರಪ್ಪುರಂ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ರಾಧಾಕೃಷ್ಣನ್ ಅವರ ಪಕ್ಷಾಂತರ ಎರ್ನಾಕುಳಂನ ಕಾಂಗ್ರೆಸ್ ನಾಯಕತ್ವಕ್ಕೆ ದೊಡ್ಡ ಹೊಡೆತವಾಗಿದ್ದು, ರಾಹುಲ್ ಸ್ವಾಗತಕ್ಕೆ ಸಿದ್ಧತೆ ನಡೆಸುವ ಮಧ್ಯೆ ಈ ಬೆಳವಣಿಗೆ ನಡೆದಿದೆ. ಇವರು ಕಾಂಗ್ರೆಸ್ ವರ್ತಕರ ಸಂಘದ ಜಿಲ್ಲಾಧ್ಯಕ್ಷರೂ ಆಗಿದ್ದಾರೆ. ಇದಲ್ಲದೆ, ರಾಧಾಕೃಷ್ಣನ್ ಅವರು ಒಬಿಸಿ ಕಾಂಗ್ರೆಸ್ ನ ಎರ್ನಾಕುಳಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ಆರ್ ಶಂಕರ್ ಫೌಂಡೇಶನ್‍ನ ಎರ್ನಾಕುಳಂ ಜಿಲ್ಲಾ ಕಾರ್ಯದರ್ಶಿ ಹುದ್ದೆಗಳನ್ನೂ ಅಲಂಕರಿಸಿದ್ದಾರೆ.
ದೇಶದಲ್ಲಿ ನರೇಂದ್ರ ಮೋದಿ ಸÀರ್ಕಾರ ಜಾರಿಗೆ ತಂದಿರುವ ಅಭಿವೃದ್ಧಿ ಕಾರ್ಯಗಳ ಮೇಲಿನ ನಂಬಿಕೆಯಿಂದ ಬಿಜೆಪಿಯತ್ತ ಆಕರ್ಷಿತರಾಗಿರುವುದಾಗಿ ರಾಧಾಕೃಷ್ಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಾರತ್ ಜೋಡೋ ಯಾತ್ರೆಯು ಮೋದಿ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದವರು ತಿಳಿಸಿದ್ದಾರೆ. ಇತರ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ತನ್ನ ನಾಯಕತ್ವ ಕೌಶಲ್ಯ ಮತ್ತು ಭ್ರμÁ್ಟಚಾರ ರಹಿತತೆ ಬಗ್ಗೆ ಹೆಮ್ಮೆಪಡುವೆ. ಕೇಂದ್ರ ಸರ್ಕಾರದ ಭ್ರμÁ್ಟಚಾರ ಮುಕ್ತ ಚಿತ್ರಣದಿಂದ ಆಕರ್ಷಿತನಾಗಿರುವೆ ಎಂದು ಅವರು ಹೇಳಿದರು.
ಕಾಂಗ್ರೆಸ್‍ಗೆ ಹಲವು ಸಮಸ್ಯೆಗಳಿವೆ. ಅದಕ್ಕಾಗಿಯೇ ಅವರು ಜೋಡೋ ಯಾತ್ರೆ ನಡೆಸುತ್ತಿದೆ. ದೇಶದ ಮುಂದಿನ ಯಶಸ್ಸಿಗೆ ಬಿಜೆಪಿ ಪ್ರಸ್ತುತವಾಗಿದೆ. ಪಂಜಾಬ್ ಮಾಜಿ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ತೊರೆಯುವ ವಿದ್ಯಮಾನ ಗಮನಾರ್ಹ. ಇದರ ಹಿಂದಿನ ಅಂಶಗಳ ಬಗ್ಗೆ ಪಕ್ಷ ಯೋಚಿಸಬೇಕು ಎಂದು ರಾಧಾಕೃಷ್ಣನ್ ಹೇಳಿದರು.
ರಾಧಾಕೃಷ್ಣನ್ ಪರಪ್ಪುರಂ ಅವರ ಪಕ್ಷಾಂತರ ಭಾರತ್ ಜೋಡೋ ಯಾತ್ರೆ ಕೊಚ್ಚಿ ತಲುಪಿದಾಗ ರಾಹುಲ್ ಗಾಂಧಿಗೆ ಬಿಜೆಪಿ ನೀಡಿದ ಪ್ರತಿಫಲವಾಗಿದೆ ಎಂದು ಬಿಜೆಪಿ ಮುಖಂಡ ಎಎನ್ ರಾಧಾಕೃಷ್ಣನ್ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆಯು ಅಲಪ್ಪುಳ ಜಿಲ್ಲೆಯನ್ನು ದಾಟಿ ಇಂದು ಸಂಜೆ ಕೊಚ್ಚಿ ತಲುಪಿದೆ.
ಎರ್ನಾಕುಳಂಗೆ ಭಾರತ್ ಜೋಡೋ ಯಾತ್ರೆ: ಕಾಂಗ್ರೆಸ್ ಮಂಡಲ ಅಧ್ಯಕ್ಷ ಬಿಜೆಪಿಗೆ ಪಕ್ಷಾಂತರ: ಭಾರತ್ ಜೋಡೋ ಯಾತ್ರೆ ತಲಪುವ ಮೊದಲೇ ಬಿಜೆಪಿ ಸೇರಿದ ಕಾಂಗ್ರೆಸ್ ಮಂಡಲ ಅಧ್ಯಕ್ಷ
0
ಸೆಪ್ಟೆಂಬರ್ 20, 2022