ತಿರುವನಂತಪುರ: ಕೇರಳವನ್ನು ಬೆಚ್ಚಿಬೀಳಿಸಿದ ಎರಡು ಕೊಲೆ ಪ್ರಕರಣಗಳ ತನಿಖೆಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಹಾಯ ಪಡೆಯಲು ವಾಳಯಾರ್ ಬಾಲಕಿಯರ ತಾಯಿ ಮತ್ತು ಅಟ್ಟಪ್ಪಾಡಿ ಮಧು ಅವರ ತಾಯಿ ತಿರುವನಂತಪುರಕ್ಕೆ ಬಂದಿದ್ದಾರೆ.
ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ಆರೋಪಿಗಳನ್ನು ನ್ಯಾಯಾಂಗದ ಮುಂದೆ ತರಲು ಕೇರಳ ಪೋಲೀಸರು ಹಾಗೂ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆರೋಪಿಗಳು ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಕೊಲೆ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸಬೇಕು ಎಂದು ವಾಳಯಾರ್ ಬಾಲಕಿಯ ತಾಯಿ ಆಗ್ರಹಿಸಿದ್ದಾರೆ.
ಬಾಲಕಿಯರ ತಾಯಿ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತಿದ್ದು, ಅವರಿಗೆ ಮಾತ್ರ ವಕೀಲರು ಬೇಕಾಗಿದ್ದಾರೆ ಮತ್ತು ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಟ್ಟಪಾಡಿಯಲ್ಲಿ ಮಧು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳು ತಮ್ಮ ನಿμÉ್ಠಯನ್ನು ಬದಲಾಯಿಸುತ್ತಿದ್ದಾರೆ. ಸÀರ್ಕಾರಿ ವ್ಯವಸ್ಥೆಗಳು ಸರಿಯಾಗಿ ಮಧ್ಯಪ್ರವೇಶಿಸುತ್ತಿಲ್ಲ. ಆರೋಪಿಗಳು ಸರ್ಕಾರದೊಂದಿಗೆ ಸಂಪರ್ಕ ಸಾಧಿಸಬಹುದಾದ ಗಣ್ಯರೊಂದಿಗೆ ನಿಕಟ ಸಂಪರ್ಕ ಹೊಂದಿರುವುದರಿಂದ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಪ್ರಕರಣದ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಕೇಂದ್ರ ಸರ್ಕಾರವು ಸಮರ್ಥ ತನಿಖಾ ಸಂಸ್ಥೆಗಳೊಂದಿಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಲು ಮಧು ಅವರ ತಾಯಿ ಅಮಿತ್ ಶಾ ಅವರನ್ನು ಭೇಟಿಯಾಗುತ್ತಿದ್ದಾರೆ. ಇವರಿಬ್ಬರೂ ಅಮಿಷ್ ಶಾ ಪಾಲ್ಗೊಳ್ಳುವ ಸಭೆಗೆ ತಿರುವನಂತಪುರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.
ಕೇರಳ ಪೋಲೀಸರ ತನಿಖೆಯಲ್ಲಿ ನಂಬಿಕೆ ಇಲ್ಲ: ಅಮಿತ್ ಶಾ ಭೇಟಿಯಾಗಲಿರುವ ವಾಳಯಾರ್ ಬಾಲಕಿಯರ ತಾಯಿ ಮತ್ತು ಮಧು ಅವರ ತಾಯಿ
0
ಸೆಪ್ಟೆಂಬರ್ 03, 2022