ಬದಿಯಡ್ಕ: ತುಳು ಲಿಪಿ ಸಂಶೋಧಕ, ವಿದ್ವಾಂಸ, ಕೇರಳ ತುಳು ಅಕಾಡೆಮಿಯ ಪ್ರಥಮ ಅಧ್ಯಕ್ಷ, ತುಳುರತ್ನ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರ(ಪು.ವೆಂ.ಪು) ಜಯಂತಿ ಪ್ರಯುಕ್ತ ತುಳುವಲ್ರ್ಡ್ ಮಂಗಳೂರು ಹಾಗೂ ಸ್ಥಳೀಯ ಸಂಘ ಸಂಸ್ಥೆ, ಪುವೆಂಪು ಅಭಿಮಾನಿಗಳ ಸಹಕಾರದಲ್ಲಿ ಅ.10ರಂದು ಅನಂತಪುರದಲ್ಲಿ ಜರಗುವ ಪುವೆಂಪು ನೆಂಪು 2022 ಹಾಗೂ ತುಳು ಲಿಪಿ ದಿನಾಚರಣೆಯ ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಬುಧವಾರ ಮಠದಲ್ಲಿ ಬಿಡುಗಡೆಗೊಳಿಸಿದರು. ಬಳಿಕ ಆಶೀರ್ವಚನ ನೀಡಿದ ಅವರು ವೆಂಕಟರಾಜ ಪುಣಿಂಚಿತ್ತಾಯರು ತುಳು ನಾಡಿನ ಅನಘ್ರ್ಯ ರತ್ನ. ಅವರ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡು ತುಳುನಾಡಿಗೆ ಕೊಡುಗೆ ನೀಡುತ್ತಿರುವ ಕಾರ್ಯ ಶ್ಲಾಘನೀಯ. ಮುಂದಿನ ಪುವೆಂಪು ಜಯಂತಿ ಕಾರ್ಯಕ್ರಮವನ್ನು ಮಠದಲ್ಲಿ ಆಚರಿಸಲು ಅನುಗ್ರಹ ನೀಡುವುತ್ತಿರುವುದಾಗಿ ತಿಳಿಸಿದರು.
ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಶಿವಳ್ಳಿ ಬ್ರಾಹ್ಮಣ ಸಭಾದ ರಕ್ಷಾಧಿಕಾರಿ ಸೀತಾರಾಮ ಕುಂಜತ್ತಾಯ, ಕಾರ್ಯಕಮದ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ವಿಜಯರಾಜ ಪುಣಿಂಚಿತ್ತಾಯ ಪುಂಡೂರು, ಕೋಶಾಧಿಕಾರಿ ಥೋಮಸ್ ಡಿ.ಸೋಜ, ತುಳುವಲ್ರ್ಡ್ ನಿರ್ದೇಶಕ ಡಾ.ರಾಜೇಶ್ ಆಳ್ವ, ಭಾಸ್ಕರ್ ಕಾಸರಗೋಡು, ಸುಂದರ ಬಾರಡ್ಕ, ಬಿ.ಪಿ.ಶೇಣಿ ಮೊದಲಾದವರು ಉಪಸ್ಥಿತರಿದ್ದರು.
ಪುವೆಂಪು ನೆಂಪು: ತುಳು ಲಿಪಿ ದಿನಾಚರಣೆ ಆಮಂತ್ರಣ ಪತ್ರಿಕೆ ಬಿಡುಗಡೆ
0
ಸೆಪ್ಟೆಂಬರ್ 29, 2022
Tags