ಕುಂಟಿಕಾನ ಮಠದಲ್ಲಿ ಪ್ರಗತಿಪರ ಕೃಷಿಕ ಪೆರ್ವ ಮಹಾಬಲ ಭಟ್ಟರಿಗೆ ಸನ್ಮಾನ
0
ಸೆಪ್ಟೆಂಬರ್ 12, 2022
ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ಶನಿವಾರ ನಡೆದ ಪರ್ವ ಕಾಲ ಉತ್ಸವದ ಸಂದರ್ಭ ಹಿರಿಯ ಕೃಷಿಕ, ಕಠಿಣ ಪ್ರಯತ್ನ ಪರಿಶ್ರಮವನ್ನೇ ಬಂಡವಾಳವನ್ನಾಗಿ ಅಳವಡಿಸಿಕೊಂಡ 71 ರ ಹರೆಯದ ಪೆರ್ವ ಮಹಾಬಲ ಭಟ್ ಇವರನ್ನು ಗೌರವಿಸಲಾಯಿತು.
ಭಾರತದ ಬೆನ್ನೆಲುಬು ಕೃಷಿ. ಅಂತಹ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ
ಮಹಾಭಲ ಭಟ್ಟರ ಸಾಧನೆ ಇನ್ನಷ್ಟು ಎತ್ತರಕ್ಕೆ ಏರಲಿ. ಯುವ ಸಮಾಜಕ್ಕೆ ಆದರ್ಶ
ದಾರಿ ದೀಪವಾಗಿ ಬೆಳಗಲಿ ಎಂದು ನಾರಾಯಣ ರಾವ್ ಪೆರ್ಲ ಅಭಿನಂದಿಸಿ ಮಾತನಾಡಿದರು.
ಮಿಂಚಿನಡ್ಕ ಮಹಾಭಲ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೆರ್ವ
ಅವರು 50 ವರ್ಷಹಿಂದೆ, ಹಳ್ಳಿಗಳಿಗೆ ವಿದ್ಯುತ್ ಸೌಕರ್ಯ ಲಭಿಸುವ ಮೊದಲೇ ನೀರಾವರಿಗೆ ಪೆಟ್ರೋಲ್ ಡೀಸಲ್ ಎಂಜಿನ್ ಗಳನ್ನು ಕೆಟ್ಟು ಹೋದಾಗ ದುರಸ್ಥಿಗೊಳಿಸುವ ತಾಂತ್ರಿಕ ತಜ್ಞನಾಗಿಯೂ ವಿಶೇಷ ಸಾಧನೆ ಮಾಡಿದ ಸವ್ಯ ಸಾಚಿ ಏಕೈಕ ವ್ಯಕ್ತಿ. ಜೇನು ವ್ಯಸಾಯ ಹೈನುಗಾರಿಕೆ ಯನ್ನೂ ನಿರಂತರವಾಗಿ ನಿರ್ವಹಿಸುತ್ತಿರುವ ಇವರಿಗೆ ಇನ್ನಷ್ಟು ಸಾಧನೆ ಮಾಡಲು ಆರೋಗ್ಯ ಸುಖ ಸಂಪತ್ತು ಶ್ರೀದೇವರು ಕರುಣಿಸಲಿ ಎಂದು ನುಡಿದರು.
ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಸತ್ಯನಾರಾಯಣ ಭಟ್ ಈಂದುಗುಳಿ, ವಿಜಯ ಕಾನ, ಶಂಕರ್ ರಾಜ್ ಮಾಸ್ತರ್, ಉದಯ ಶಂಕರ ಭಟ್ ಮುಂಡಕಾನ ಉಪಸ್ಥಿತರಿದ್ದು ಶುಭಹಾರೈಸಿದರು.
Tags