ನವದೆಹಲಿ: ವಿದ್ಯುತ್ ಚಾಲಿತ ವಾಹನಗಳಿಗೆ ಅಳವಡಿಸುವ ಬ್ಯಾಟರಿಯನ್ನು ಹೆಚ್ಚು ಸುರಕ್ಷಿತವಾಗಿಸಲು ವಾಹನ ತಯಾರಿಕಾ ಸಂಸ್ಥೆಗಳು ಕಠಿಣ ಮಾನದಂಡ ಅಳವಡಿಸಿಕೊಳ್ಳಲು ಹೆಚ್ಚಿನ ಸಮಯಾವಕಾಶವನ್ನು ಕೇಂದ್ರ ಭೂಸಾರಿಗೆ ಸಚಿವಾಲಯವು ನೀಡಿದೆ.
ಮೊದಲ ಹಂತದ ಸುರಕ್ಷತಾ ಮಾನದಂಡಗಳನ್ನು ಡಿಸೆಂಬರ್ 1ರೊಳಗೆ ಹಾಗೂ ಎರಡನೇ ಹಂತದ ಸುರಕ್ಷತಾ ಕ್ರಮಗಳನ್ನು 2023ರ ಮಾರ್ಚ್ 31ರೊಳಗೆ ಅಳವಡಿಸಬೇಕು ಎಂದು ತಿಳಿಸಿದೆ.