ಎರ್ನಾಕುಳ: ಪಶ್ಚಿಮ ಏμÁ್ಯ ರಾಷ್ಟ್ರಗಳು ನಿμÉೀಧಿಸಿರುವ ಮುಸ್ಲಿಂ ಬ್ರದರ್‍ಹುಡ್ ಜೊತೆ ಪಾಪ್ಯುಲರ್ ಫ್ರಂಟ್ ಸಂಪರ್ಕ ಹೊಂದಿದೆ ಎಂದು ಎನ್‍ಐಎ ಹೇಳಿಕೊಂಡಿದೆ.
ಮುಸ್ಲಿಂ ಬ್ರದರ್‍ಹುಡ್ ಮುಖಂಡರೊಂದಿಗೆ ಪಾಪ್ಯುಲರ್ ಫ್ರಂಟ್‍ನ ಸಂಪರ್ಕದ ದಾಖಲೆಗಳನ್ನು ಎನ್‍ಐಎ ಪಡೆದುಕೊಂಡಿದೆÉ. ನಾಯಕರಾದ ಮುಹಮ್ಮದ್ ಮಹದಿ ಮತ್ತು ಯೂಸುಫ್ ಅಲ್ ಖರದಾವಿ ಅವರೊಂದಿಗೆ ಸಂಬಂಧ ಹೊಂದಿದ್ದಾರೆ. ಪಾಪ್ಯುಲರ್ ಫ್ರಂಟ್ ಮುಸ್ಲಿಂ ಬ್ರದರ್‍ಹುಡ್ ನಾಯಕರಿಗೆ ವಿಶ್ವದಲ್ಲಿ ಇಸ್ಲಾಮಿಕ್ ಕ್ಯಾಲಿಫೇಟ್ ನ್ನು ಮರಳಿ ತರುವ ಚಟುವಟಿಕೆಗಳಲ್ಲಿ ಭಾಗವಹಿಸುವುದಾಗಿ ಭರವಸೆ ನೀಡಿದ್ದು ಕಂಡುಬಂದಿದೆ.
ಇದಲ್ಲದೇ ಪಾಪ್ಯುಲರ್ ಫ್ರಂಟ್ ಟರ್ಕಿ ಮೂಲದ ಎನ್ ಜಿಒಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ತನಿಖಾ ತಂಡ ಸ್ಪಷ್ಟಪಡಿಸಿದೆ. ಈ ಎನ್‍ಜಿಒಗಳು ಮುಸ್ಲಿಂ ಬ್ರದರ್‍ಹುಡ್‍ನ ಸ್ಥಳೀಯ ಶಾಖೆಗಳಾಗಿವೆ. ಮತ್ತು ಬ್ರದರ್‍ಹುಡ್ ಪಾಪ್ಯುಲರ್ ಫ್ರಂಟ್‍ಗಾಗಿ ಹಣವನ್ನು ಸಂಗ್ರಹಿಸಿದೆ. ಈಜಿಪ್ಟ್ ಮುಸ್ಲಿಂ ಬ್ರದರ್‍ಹುಡ್ ನಾಯಕ ಯೂಸುಫ್ ಅಲ್-ಕರದಾವಿ ಅವರ ಸಹಾಯದಿಂದ ಹಣ ಸಂಗ್ರಹಣೆ ಮಾಡಲಾಗಿದೆ. ಡಾ.ಅಬ್ದುಲ್ ಸಲಾಂ ಅಹಮದ್ ಸಂಗ್ರಹದ ನೇತೃತ್ವ ವಹಿಸಿದ್ದರು.
ದೇಶದಲ್ಲಿ ಎನ್ ಐಎ ನಡೆಸಿದ ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಪಾಪ್ಯುಲರ್ ಫ್ರಂಟ್ ಒಂದು ಸಮುದಾಯದ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಂಡವು ಪತ್ತೆ ಮಾಡಿದೆ. ಎನ್‍ಐಎ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ವಿಷಯಗಳಿವೆ. ಬಂಧಿತರು ಹಿಟ್ ಲಿಸ್ಟ್ ಸಿದ್ಧಪಡಿಸುವುದಲ್ಲದೆ ಹಲವು ಹಿಂಸಾಚಾರದ ಯೋಜನೆಗಳನ್ನೂ ರೂಪಿಸಿದ್ದರು. ಸಮಾಜದ ಪ್ರಗತಿಗೆ ಪಾಪ್ಯುಲರ್ ಫ್ರಂಟ್‍ನ ಹಿಂಸಾತ್ಮಕ ಚಟುವಟಿಕೆಗಳನ್ನು ನಿಲ್ಲಿಸುವುದು ಅತ್ಯಗತ್ಯ ಎಂದು ಎನ್‍ಐಎ ನ್ಯಾಯಾಲಯಕ್ಕೆ ತಿಳಿಸಿದೆ.
ಎನ್.ಐ.ಎ ಹೊರತಾಗಿ ಇಡಿ ಕೂಡ ಪಾಪ್ಯುಲರ್ ಫ್ರಂಟ್ ವಿರುದ್ಧದ ವರದಿ ಆಘಾತಕಾರಿಯಾಗಿದೆ ಎಂದಿದೆ . ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಪಾಪ್ಯುಲರ್ ಫ್ರಂಟ್ ಯೋಜನೆ ಸಿದ್ಧಪಡಿಸಿತ್ತು ಎಂದು ಇಡಿ ಪತ್ತೆ ಮಾಡಿದೆ. ಜುಲೈ 12ರಂದು ಪಾಟ್ನಾದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಲಾಗಿತ್ತು. ಈ ಉದ್ದೇಶಕ್ಕಾಗಿ ಪಾಪ್ಯುಲರ್ ಫ್ರಂಟ್ ನಿಂದ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು ಎಂದೂ ಇಡಿ ಪತ್ತೆ ಮಾಡಿದೆ.
ಮುಸ್ಲಿಂ ಬ್ರದರ್‍ಹುಡ್ ಜೊತೆ ಪಾಪ್ಯುಲರ್ ಫ್ರಂಟ್ ಸಂಬಂಧ: ಇಸ್ಲಾಮಿಕ್ ಖಲೀಫತ್ ನ್ನು ಮರಳಿ ತರಲು ಪ್ರಯತ್ನ: ಎನ್.ಐ.ಎ
0
ಸೆಪ್ಟೆಂಬರ್ 25, 2022
Tags