ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಸಮಿತಿ ಸದಸ್ಯರು ಹಾಗೂ ಉದ್ಯೋಗಿಗಳ ನೇತೃತ್ವದಲ್ಲಿ ಓಣಂ ಆಚರಣೆಯು ವಿವಿಧ ಕಾರ್ಯಕ್ರಮಗಳೊಂದಿಗೆ ಪಂಚಾಯತು ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು. ಉಪಾಧ್ಯಕ್ಷೆ ಡಾ.ಜಹನಾಸ್ ಹಂಸಾರ್, ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಬಿ.ಎಸ್.ಗಾಂಭೀರ್, ಜಯಶ್ರೀಕುಲಾಲ್, ಸೌದಾಭಿ ಹನೀಫ್, ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ್, ಬ್ಲಾಕ್ ಪಂ.ಸದಸ್ಯ ಅನಿಲ್ ಕುಮಾರ್ ಕೆ.ಪಿ, ವಿವಿಧ ವಾರ್ಡ್ ಸದಸ್ಯರು ,ಕುಟುಂಬಶ್ರಿ ಸದಸ್ಯೆಯರು,ಹಸಿರು ಕ್ರಿಯಾ ಸೇನೆ ಕಾರ್ಯಕರ್ತರು, ವಿವಿಧ ರಾಜಕೀಯ ಸಾಂಸ್ಕøತಿಕ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಓಣಂ ಔತಣ ಕೂಟ,ಮಹಾಬಲಿ ವೇಷ, ಪಂ.ಸದಸ್ಯರು, ಪಂ.ಸಿಬ್ಬಂದಿ,ವಿವಿಧ ಇಲಾಖೆಯವರಿಗಾಗಿ ಆಯೋಜಿಸಿದ ವಿವಿಧ ಸ್ಪರ್ಧೆಗಳು, ತಿರುವಾದಿರ, ನೃತ್ಯ, ಗಾಯನ, ಕ್ವಿಜ್, ಕಾರ್ಯಕ್ರಮಗಳು ಜನಮನ ರಂಜಿಸಿತು. ಪಂ.ಸಹ ಕಾರ್ಯದರ್ಶಿ ಬಿನೀಶ್ ಸ್ವಾಗತಿಸಿ, ಮುಖ್ಯ ಕ್ಲಾರ್ಕ್ ಪ್ರೇಮ್ ಚಂದ್ ವಂದಿಸಿದರು. ನವಾಸ್ ಮತ್ರ್ಯ ಕಾರ್ಯಕ್ರಮ ನಿರೂಪಿಸಿದರು.