ಕಾಸರಗೋಡು: ಜಿಲ್ಲೆಯಲ್ಲಿ ಅನಾಥಾಶ್ರಮ ಸಲಹೆಗಾರರ ಒಂದು ಹುದ್ದೆ ಖಾಲಿ ಇದ್ದು, ಸಂದರ್ಶನವು ಅಕ್ಟೋಬರ್ 11 ರಂದು ಜಿಲ್ಲಾ ಸಾಮಾಜಿಕ ನೀತಿ ಕಛೇರಿಯಲ್ಲಿ ನಡೆಯಲಿದೆ. ಎಂಎಸ್.ಡಬ್ಲ್ಯು ವಿದ್ಯಾರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು. ವೈದ್ಯಕೀಯ ಮತ್ತು ಮನೋವೈದ್ಯಕೀಯ ಸಾಮಾಜಿಕ ಕಾರ್ಯದಲ್ಲಿ ಎಂ.ಎಸ್.ಡಬ್ಲ್ಯು ಪಡೆದವರಿಗೆ ಆದ್ಯತೆ. ಅಭ್ಯರ್ಥಿಗಳ ಅನುಪಸ್ಥಿತಿಯಲ್ಲಿ ಮಕ್ಕಳು, ಅಂಗವಿಕಲರು, ಹಿರಿಯರು ಮತ್ತು ಸ್ತ್ರೀಯರು ಎಂಬೀ ಕ್ಷೇತ್ರಗಳಲ್ಲಿ 10 ವರ್ಷ ಕೆಲಸ ಮಾಡಿ ಅನುಭವ ವಿರುವ ಎಮ್‍ಎ/ಎಂಎಸ್ಸಿ ಸೈಕಾಲಜಿ ಉನ್ನತ ಪದವಿ ಇರುವವರನ್ನು ಪರಿಗಣಿಸಲಾಗುತ್ತದೆ.ಮೇಲಿನ ಎರಡೂ ವಿಭಾಗದ ಅಭ್ಯರ್ಥಿಗಳ ಅನುಪಸ್ಥಿತಿಯಲ್ಲಿ ಟ್ರೈಬಲ್, ಮಲೆನಾಡಿನ ಒಳಪ್ರದೇಶ ಗಳಲ್ಲಿ ಮಕ್ಕಳು, ಅಂಗವಿಕಲರು, ಹಿರಿಯರು ಮತ್ತು ಮಹಿಳೆಯರು ಎಂಬೀ ಕ್ಷೇತ್ರ ಗಳಲ್ಲಿ 20 ವರ್ಷಗಳ ಕೆಲಸ ಮಾಡಿದ ಅನುಭವ ವಿರುವ ಡಿಗ್ರಿ ಯೋಗ್ಯತೆ ಹೊಂದಿದ ಅಭ್ಯರ್ಥಿ ಗಳನ್ನು ಪರಿಗಣಿಸಲಾಗುತ್ತದೆ. ಅರ್ಜಿದಾರರು 25 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಅಭ್ಯರ್ಥಿಗಳು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಸಾಮಾಜಿಕ ನೀತಿ ಕಛೇರಿಯಲ್ಲಿ ಹಾಜರಾಗ ಬೇಕು. ದೂರವಾಣಿ 04994 255074
ಅನಾಥಾಶ್ರಮ ಸಲಹೆಗಾರರ ನೇಮಕಕ್ಕೆ ಅರ್ಜಿ ಆಹ್ವಾನ
0
ಸೆಪ್ಟೆಂಬರ್ 24, 2022