ಬದಿಯಡ್ಕ : ಕೇರಳ ರಾಜ್ಯ ಮರಾಟಿ ಸಮುದಾಯವನ್ನು ಮೀಸಲಾತಿ ಪಟ್ಟಿಯಿಂದ ಹೊರತುಪಡಿಸಿದಾಗ ಕೇರಳ ಸಂರಕ್ಷಣಾ ಸಮಿತಿಯನ್ನು ರೂಪೀಕರಿಸಿ ಹೋರಾಟ ನಡೆಸಿದ ಫಲವಾಗಿ 2013 ಸೆ. 19ರಂದು ಮರಾಟಿ ಜನಾಂಗವನ್ನು ಮರಳಿ ಪರಿಶಿಷ್ಟ ವರ್ಗ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸÀರ್ಕಾರ ನಡೆಸಿದ ಆದೇಶದ ಸವಿನೆನಪಿಗಾಗಿ ಆಚರಿಸುವ 9ನೇ ವರ್ಷದ ಮರಾಟಿ ದಿನ ಸೋಮವಾರ ಬದಿಯಡ್ಕ ಗುರುಸದನದಲ್ಲಿ ನಡೆಯಿತು.
ಕಾರ್ಯಕ್ರಮದಂಗವಾಗಿ ಓಣಿಯಡ್ಕ ನೀರ್ಚಾಲು ಶಿವಪ್ಪ ನಾಯ್ಕ ಧ್ವಜಾರೋಹಣಗೈದರು. ಕೋಝಿಕ್ಕೋಡ್ ಸಿಟಿ ಪೊಲೀಸ್ ಕಮೀಷನರ್ ಹರಿಶ್ಚಂದ್ರ ನಾಯ್ಕ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಮರಾಟಿ ಸಮಾಜ ಇಂದು ಒಗ್ಗಟ್ಟಿನಿಂದ ಎಲ್ಲರಿಗೂ ಮಾದರಿಯಾಗಿ ಮುನ್ನಡೆಯುತ್ತಿದೆ. ರದ್ದಾದ ಮೀಸಲಾತಿಯನ್ನು ಮರಳಿ ಪಡೆಯುವಲ್ಲಿ ಸಂಘಟನೆ ಯಶಸ್ವಿಯಾಗಿದೆ. ಸಮಾಜವನ್ನು ಒಟ್ಟುಗೂಡಿಸಿ ಸಮಾಜ ಹಾಗೂ ಯುವಜನಗಳ ಅಭವೃದ್ಧಿಗಾಗಿ ಸದಾ ಪ್ರಯತ್ನಿಸಬೇಕು. ಸವಲತ್ತುಗಳ ಸದುಪಯೋಗ ಸರ್ಕಾರದ ಯೋಜನೆಗಳ ಮಾಹಿತಿ ನೀಡುವ ಕಾರ್ಯಗಳನ್ನು ನಡೆಸಿ ಸೌಲಭ್ಯಗಳನ್ನು ಪಡೆಯುವತ್ತ ಚಿಂತನೆ ನಡೆಸಬೇಕು ಎಂದು ಹೇಳಿದರು.
ಈ ಸಂದರ್ಭ ಪದ್ಮಶ್ರೀ ಪುರಸ್ಕøತ ಹಿರಿಯ ಸಾಧಕ ಮಾಲಿಂಗ ನಾಯ್ಕ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕೇರಳ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿ ಕ್ರೀಡೆ, ಸಾಹಿತ್ಯ, ಸಾಂಸ್ಕøತಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮರಾಟಿ ದಿನದಂದು 2021-22ನೇ ಸಾಲಿನಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ರಾಜ್ಯ ಮಟ್ಟದ ಕ್ರೀಡೆ ಮತ್ತು ಕಲಾ, ಸಾಹಿತ್ಯದಲ್ಲಿ ಭಾಗಿಯಾದ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋsತ್ಸಾಹಿಸುವುದು ನಮ್ಮ ಕರ್ತವ್ಯ. ಅಲ್ಲದೆ ಪದ್ಮಶ್ರೀ ಮಾಲಿಂಗ ನಾಯ್ಕರಂತಹ ಹಿರಿಯರು ನಮ್ಮ ಸಮಾಜದ ಶಕ್ತಿ, ಮತ್ತು ಆಸ್ತಿ ಆದುದರಿಂದ ಇಂದು ನಾವು ಅವರನ್ನು ಸನ್ಮಾನಿಸಿ ಗೌರವಿಸಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಹಿರಿಯರ ಮಾರ್ಗದರ್ಶನದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು.
ಕೇರಳ ಮರಾಟಿ ಸಂಘ ಬೆಂಗಳೂರು ಅಧ್ಯಕ್ಷ ದುರ್ಗಾ ಪ್ರಸಾದ್ ಮಜೆಕ್ಕಾರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಕರ್ನಾಟಕ ಕೇರಳ ಟ್ರೈಬಲ್ ಮರಾಟಿ ಫೆಡರೇಶನ್‍ನ ಅಧ್ಯಕ್ಷ ಟಿ. ಸುಬ್ರಾಯ ನಾಯ್ಕ, ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ ಅಡ್ಕಸ್ಥಳ, ಯೂತ್ ಜನರೇಶನ್ ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಮಾಸ್ತರ್, ಪೆರ್ಲ ಶಾರದಾ ಮರಾಟಿ ಸಂಘ ಅಧ್ಯಕ್ಷ ಬಾಲಕೃಷ್ಣ ಬಾರಿಕ್ಕಾಡ, ಕಾಸರಗೋಡು ಜನರಲ್ ಆಸ್ಪತ್ರೆಯ ಡಾ. ನಾರಾಯಣ ನಾಯ್ಕ, ತಿರುವನಂತಪುರ ಕೆಎಸ್‍ಇಬಿ ಚೀಫ್ ಎಂಜಿನಿಯರ್ ಸುರೇಂದ್ರ ನಾಯ್ಕ, ಪೆರ್ಲ ಕೆ.ಎಸ್.ಇ.ಬಿ. ಸಹಾಯಕ ಅಭಿಯಂತರ ರಾಜಗೋಪಾಲ ಎ.ಕೆ., ಕೆ.ಎಂ.ವೈ.ಜಿಸಿ. ಮಾಜಿ ಅಧ್ಯಕ್ಷ ವಿಶ್ವನಾಥ ನಾಯ್ಕ, ಎ.ಕೆ., ಕೆ.ಎಂ.ವೈ.ಜಿಸಿ. ಮಾಜಿ ಅಧ್ಯಕ್ಷೆ ಲೀಲ ಟೀಚರ್, ಕುರುಜ್ಜಿಗುಡ್ಡೆ ಗಿರಿದರ್ಶಿನಿ ಮರಾಟಿ ಸೇವಾ ಸಂಘದ ಸುಲೋಚನಾ ನಾರಾಯಣ ನಾಯ್ಕ, ಬದಿಯಡ್ಕ ಎಸ್.ಟಿ. ಪ್ರಮೋಟರ್ ಶಾರದ ನವಕಾನ, ಕೆ.ಎಂ.ಎಸ್.ಎ. ಅಧ್ಯಕ್ಷ ಮಮತೇಶ್, ಮರಾಟಿ ದಿನ 2022 ಜನರಲ್ ಕನ್ವೀನರ್ ಬಾಲಕೃಷ್ಣ ನಾಯ್ಕ ನೀರ್ಚಾಲು ಶುಭಾಶಂಸನೆಗೈದರು. ಬಳಿಕ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ರಶ್ಮಿ ಹಾಗೂ ರೇಶ್ಮ ಪ್ರಾರ್ಥನೆ ಹಾಡಿದರು. ಕೇರಳ ಮರಾಟಿ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಪುಟ್ಟ ನಾಯ್ಕ ಚೇರಾಲು ಸ್ವಾಗತಿಸಿ, ಯೂತ್ ಜನರೇಶನ್ ಕ್ಲಬ್ ಕಾರ್ಯದರ್ಶಿ ನಾರಾಯಣ ನಾಯ್ಕ ಪರ್ಪಕರ್ಯ ವಂದಿಸಿದರು.