ನವದೆಹಲಿ: ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಕೇಂದ್ರ ಸರ್ಕಾರ ನಿವೃತ್ತ ಲೆ. ಜನರಲ್ ಅನಿಲ್ ಚೌಹಾಣ್ ಅವರನ್ನು ನೇಮಿಸಿದೆ.
ಈಸ್ಟರ್ನ್ ಕಮಾಂಡ್ ಚೀಫ್ ಆಗಿದ್ದ ಅನಿಲ್ ಚೌಹಾಣ್ 2021ರ ಮೇನಲ್ಲಿ ನಿವೃತ್ತರಾಗಿದ್ದರು.
ಇದೀಗ ಅವರನ್ನು ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಅಲ್ಲದೆ ಇವರು ಕೇಂದ್ರ ಸರ್ಕಾರದ ಸೇನಾ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ.
ಭಾರತೀಯ ಸೇನಾಪಡೆಗಳ ಮುಖ್ಯಸ್ಥ (ಸಿಡಿಸಿ) ಆಗಿದ್ದ ಬಿಪಿನ್ ರಾವತ್ 2021ರ ಡಿ. 8ರಂದು ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ್ದ ಹೆಲಿಕಾಪ್ಟರ್ ಪತನದಲ್ಲಿ ಸಾವಿಗೀಡಾಗಿದ್ದರು. ಈ ದುರಂತದಲ್ಲಿ ರಾವತ್ ಅವರ ಪತ್ನಿ ಮಧುಲಿಕಾ ಸೇರಿ 13 ಒಟ್ಟು 13 ಮಂದಿ ಮೃತಪಟ್ಟಿದ್ದರು. ಅದಾಗಿ ಒಂಬತ್ತು ತಿಂಗಳ ಬಳಿಕ ಸರ್ಕಾರ ನೂತನ ಸಿಡಿಸಿ ಅವರನ್ನು ನೇಮಿಸಿದೆ.