ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ದ್ವಿತೀಯ ಚಾತುರ್ಮಾಸ್ಯ ಶನಿವಾರ ಮೃತ್ತಿಕಾ ವಸರ್ಜಿನೆ, ಸೀಮೋಲ್ಲಂಘನ ಸಹಿತ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಬೆಳಿಗ್ಗೆ 6.30 ಕ್ಕೆ ಉಷಃಪೂಜೆ, 9 ಕ್ಕೆ ಮೃತ್ತಿಕಾ ವಿಸರ್ಜನೆ, ಸೀಮೋಲ್ಲಂಘನೆ ವಿವಿಧ ವಿಧಿಗಳೊಂದಿಗೆ ನೆರವೇರಿತು. ಬಳಿಕ 9.30 ಕ್ಕೆ ಎಡನೀರು ಶ್ರೀಗೋಪಾಲಕೃಷ್ಣ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಿತು. 11 ರಿಂದ ಡಾ.ಎಂ.ಪ್ರಭಾಕರ ಜೋಶಿ ಹಾಗೂ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಅವರಿಂದ ವಿಶೇಷ ಉಪನ್ಯಾಸ-ಸತ್ಸಂಗ ನಡೆಯಿತು. 12 ರಿಂದ ಹೋಮ ಪೂರ್ಣಾಹುತಿ, 12.30 ಕ್ಕೆ ಮಹಾಪೂಜೆ, 2 ರಿಂದ ಮಂತ್ರಾಕ್ಷತೆ ವಿತರಣೆ ನಡೆಯಿತು. ಅಪರಾಹ್ನ 3 ರಿಂದ ಸಮಾರೋಪ ಸಮಾರಂಭ ಶ್ರೀಗಳ ಉಪಸ್ಥಿತಿಯಲ್ಲಿ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಡಾ.ಟಿ.ಶಾಮ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಗಣ್ಯರು ಉಪಸ್ಥಿತರಿದ್ದರು. ಬಳಿಕ ಕೋದಂಡರಾಮ ಕೃಪಾಪೋಶಿತ ಯಕ್ಷಗಾನ ಮಂಡಳಿಯವರಿಂದ ಭಗವದರ್ಶನ ಯಕ್ಷಗಾನ ಪ್ರದರ್ಶನ ನಡೆಯಿತು.