ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಶೀಘ್ರವೇ 'ಡೆ ನೊವೊ' (De Novo) ವರ್ಗದಡಿ ಸ್ವಾಯತ್ತವಾಗಲಿರುವ ವಿಶ್ವವಿದ್ಯಾನಿಲಯ ಎಂಬ ಸ್ಥಾನಮಾನ ಪಡೆಯಲು ಸಜ್ಜಾಗಿದೆ.
ಸೋಮವಾರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಧ್ಯಕ್ಷತೆಯಲ್ಲಿ ನಡೆದ NCERT ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಡೀಮ್ಡ್ ಯುನಿವರ್ಸಿಟಿಗಳು (De-Novo Deemed University), ವಿಶಿಷ್ಟ ಹಾಗೂ ವಿಕಾಸ ಹಂತದ ಜ್ಞಾನಶಾಖೆಗಳ ಅಧ್ಯಯನಕ್ಕಾಗಿ ಹೊಸ ಸಂಸ್ಥೆಗಳನ್ನು ಡೀಮ್ಡ್ ಟೂ ಬಿ ಯುನಿವರ್ಸಿಟಿಗಳಾಗಿ ಅಭಿವೃದ್ಧಿಪಡಿಸಲು ಯುಜಿಸಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದರಲ್ಲಿ ಶಿಕ್ಷಣ ಸಂಶೋಧನೆ ಮತ್ತು ಅನುಶೋಧನೆ, ಪಠ್ಯಕ್ರಮ ಅಭಿವೃದ್ಧಿ ಮತ್ತು ಬೋಧನಾ-ಕಲಿಕಾ ಅಂಶಗಳು ಸೇರಿವೆ.
NCERTಯ ಪ್ರಾದೇಶಿಕ ಸಂಸ್ಥೆಗಳ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ನೀಡುವ ಸಂಸ್ಥೆಗಳು ರಾಜ್ಯ ಅಥವಾ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಂಲಗ್ನತ್ವ ಪಡೆದಿರುತ್ತವೆ.
ಪ್ರಸ್ತುತ ಎನ್‍ಸಿಇಆರ್‍ಟಿಯ ಮೂಲಸೌಕರ್ಯ ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದ ಶೈಕ್ಷಣಿಕ ಕೋರ್ಸ್‍ಗಳು ವಿಶ್ವವಿದ್ಯಾನಿಲಯ ವ್ಯವಸ್ಥೆಗೆ ಸಮಾನವಾಗಿವೆ. ಎನ್‍ಸಿಇಆರ್‍ಟಿಗೆ ಡೀಮ್ಡ್ ಟು ಬಿ ಸ್ಥಾನಮಾನ, ಸಂಸ್ಥೆಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಗೊಳಿಸಲಿವೆ ಎಂದು ಸಂಸ್ಥೆಯ ಕಾರ್ಯಸೂಚಿ ಟಿಪ್ಪಣಿಯಲ್ಲಿ ಹೇಳಲಾಗಿದೆ.
ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೆರವು ಹಾಗೂ ಸಲಹೆ ನೀಡಲು ಎನ್‍ಸಿಇಆರ್‍ಟಿಯನ್ನು 1961ರಲ್ಲಿ ಸೊಸೈಟಿಗಳ ಕಾಯ್ದೆಯಡಿ ಸರ್ಕಾರ ಸ್ಥಾಪನೆ ಮಾಡಿದೆ ಎಂದು timesofindia.com ವರದಿ ಮಾಡಿದೆ.