ಕಾಸರಗೋಡು: ಹಿರಿಯ ಪತ್ರಕರ್ತ, ಅಟ್ಟೆಂಗಾನ ಪೋರ್ಕಳ ನಿವಾಸಿ ಉಣ್ಣಿಕೃಷ್ಣನ್ ಪುಷ್ಪಗಿರಿ(64)ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹೃದಯಾಘಾತದ ಹಿನ್ನೆಲೆಯಲ್ಲಿ ಒಂದು ತಿಂಗಳ ಹಿಂದೆ ಇವರನ್ನು ಆಸ್ಪತ್ರೆಗೆ ದಾಖಲಿಸಲಾಘಿತ್ತು. ಕಾಸರಗೋಡಿನ ಮಲಯಾಳ ಸಂಜೆ ಪತ್ರಿಕೆ ಉತ್ತರದೇಶದ ಮುಖ್ಯ ಸುದ್ದಿಸಂಪಾದಕರಾಗಿದ್ದ ಇವರು ಸೀನಿಯರ್ ಜರ್ನಲಿಸ್ಟ್ ಫಾರಂನ ಕಾಸರಗೋಡು ಜಿಲ್ಲಾ ಸಮಿತಿ ಕೋಶಾಧಿಕಾರಿಯಾಗಿದ್ದರು. ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ಕಾಸರಗೋಡು ಜಿಲ್ಲಾ ಪ್ರತಿನಿಧಿ, ಹರಿಣಾಕ್ಷಿಯಮ್ಮ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿದ್ದರು. ಕಾಸರಗೋಡು ಪ್ರೆಸ್‍ಕ್ಲಬ್ ಕಾರ್ಯದರ್ಶಿ, ಪತ್ರಕರ್ತರ ವಸತಿ ನಿರ್ಮಾಣ ಸಂಘದ ನಿರ್ದೇಶಕ, ರಜನಿ ಬಾಲಜನಸಖ್ಯದ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ನಾಲ್ಕು ದಶಕಗಳ ಕಾಲ ಪತ್ರಿಕಾ ವಲಯದಲ್ಲಿ ಕೆಲಸ ನಿರ್ವಹಿಸಿರುವ ಇವರು ನಾಟಕ ರಂಗದಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಪತ್ರಕರ್ತ ಉಣ್ಣಿಕೃಷ್ಣನ್ ಪುಷ್ಪಗಿರಿ ನಿಧನ
0
ಸೆಪ್ಟೆಂಬರ್ 07, 2022
Tags