ಕುಂಬಳೆ: ಶೇಡಿಕಾವು ಶ್ರೀ ಕೃಷ್ಣ ವಿದ್ಯಾಲಯದಲ್ಲಿ ಓಣಂ ಹಬ್ಬದ ಆಚರಣೆ ವಿವಿಧ ಆಟೋಟ ಸ್ಪರ್ಧೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಶೇಂತಾರು ನಾರಾಯಣ ಭಟ್, ಶಾಲಾ ಸಹ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಸುನೀತ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿಕ್ಷಕಿ ವಸಂತ ಓಣಂ ಹಬ್ಬದ ಕುರಿತಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಚೈತನ್ಯ ಸ್ವಾಗತಿಸಿ,ಆಶಾ ವಂದಿಸಿದರು. ನಿಮಿಷ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿ ಶಮಂತ್ ಹಾಗೂ ತನ್ವಿ ಹಬ್ಬದ ಕುರಿತಾಗಿ ಮಾತನಾಡಿದರು.ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶ್ರೀಕೃಷ್ಣ ವಿದ್ಯಾಲಯ ಶೇಡಿಕಾವು ಶಾಲೆಯಲ್ಲಿ ಓಣಂ ಆಚರಣೆ
0
ಸೆಪ್ಟೆಂಬರ್ 04, 2022