ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹತ್ಯೆಗೆ ವಿಫಲ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ.
ಯೂರೋ ವೀಕ್ಲೀ ಈ ಮಾಹಿತಿಯನ್ನು ವರದಿ ಮಾಡಿದ್ದು, ವರದಿಯ ಪ್ರಕಾರ, ಪುಟಿನ್ ಈ ದಾಳಿಯಲ್ಲಿ ಯಾವುದೇ ಅಪಾಯವಾಗದೇ ಪಾರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ.
ರಷ್ಯಾದಲ್ಲಿ ಮಾಧ್ಯಮಗಳಿಗೆ ನಿರ್ಬಂಧವಿದ್ದು, ಹತ್ಯೆ ಯತ್ನ ಯಾವಾಗ ನಡೆಯಿತು ಎಂಬುದರ ಬಗ್ಗೆ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ ಈ ಘಟನೆ ಸಂಬಂಧ ಒಂದಷ್ಟು ಮಂದಿಯನ್ನು ಬಂಧಿಸಲಾಗಿದೆ.
ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಪುಟಿನ್ ಸಂಚರಿಸುತ್ತಿದ್ದ ಕಾರಿನ ಎಡ ಭಾಗದ ಚಕ್ರದ ಬಳಿ ಜೋರಾದ ಶಬ್ದವಾಗಿದ್ದು, ಬೆಂಗಾವಲು ವಾಹನಗಳ ಪೈಕಿ ಮೊದಲ ವಾಹನಕ್ಕೆ ಆಂಬುಲೆನ್ಸ್ ಅಡ್ಡ ಬಂದಿದೆ, ಏಕಾ ಏಕಿ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಎರಡನೇ ವಾಹನ ನಿಲ್ಲಿಸದೇ ವೇಗವಾಗಿ ಸಂಚರಿಸಿದೆ ಎಂದು ಯುರೋ ವೀಕ್ಲೀ ವರದಿಯಲ್ಲಿ ಹೇಳಿದೆ.