ಮುಳ್ಳೇರಿಯ: ನವ ಭಾರತ ಸಾಕ್ಷರತಾ ಕಾರ್ಯಕ್ರಮದ ಭಾಗವಾಗಿ ಬೆಳ್ಳೂರು ಗ್ರಾಮ ಪಂಚಾಯತಿ ಮಟ್ಟದ ಸಂಘಟನಾ ಸಮಿತಿಯನ್ನು ರಚಿಸಲಾಯಿತು. ಈ ಸಂದರ್ಭ ಪಂಚಾಯತಿಯ 13 ವಾರ್ಡ್‍ಗಳಲ್ಲಿ 260 ಜನರನ್ನು ಎರಡು ವಿಭಿನ್ನ ವರ್ಗಗಳಲ್ಲಿ ಸಾಕ್ಷರರನ್ನಾಗಿ ಮಾಡಲು ನಿರ್ಧರಿಸಲಾಯಿತು.
ಸಂಘಟನಾ ಸಮಿತಿ ರಚನೆಯಲ್ಲಿ ಗ್ರಾ.ಪಂ. ಆರೋಗ್ಯ-ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಕೆ.ಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಅಧ್ಯಕ್ಷ ಶ್ರೀಧರ ಎಂ. ಉದ್ಘಾಟಿಸಿದರು. ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಿ ಮಾತನಾಡಿದರು. ಗ್ರಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ರೈ, ಸುಜಾತಾ ಎಂ ರೈ, ಗ್ರಾಮ ಪಂಚಾಯತಿ ಸದಸ್ಯರಾದ ಬಿ.ಎನ್.ಗೀತಾ, ದುರ್ಗಾದೇವಿ, ಭಾಗೀರಥಿ, ವೀರೇಂದ್ರ ಕುಮಾರ್, ಐಸಿಡಿಎಸ್ ಮೇಲ್ವಿಚಾರಕಿ ಮಂಜುಳಾ, ಕುಟುಂಬಶ್ರೀ ಮಾಜಿ ಅಧ್ಯಕ್ಷೆ ಮಾಲಿನಿ, ಮಾಜಿ ಪ್ರೇರಕ್ ಕೃಷ್ಣಕಾಂತ್ ರೈ, ಪ್ರೇರಕರಾದ ಶಶಿಕಲಾ, ಸುನೀತಾ, ಸತ್ಯವತಿ ಮಾತನಾಡಿದರು. ಪ್ರೇರಕರು, ಆಶಾ ಕಾರ್ಯಕರ್ತೆಯರು, ವಿವಿಧ ಕ್ಲಬ್‍ಗಳ ಪದಾಧಿಕಾರಿಗಳು, ಗ್ರಂಥಪಾಲಕರನ್ನೊಳಗೊಂಡ ಸಂಘಟನಾ ಸಮಿತಿ ರಚಿಸಲಾಯಿತು. ಅಕ್ಟೋಬರ್ 2 ಗಾಂಧಿ ಜಯಂತಿಯಂದು ಅನಕ್ಷರಸ್ಥರ ಪತ್ತೆಗೆ ಸಮೀಕ್ಷೆ ನಡೆಸಲು ನಿರ್ಧರಿಸಲಾಯಿತು.
ಬೆಳ್ಳೂರು ಪಂಚಾಯತ್‍ನಲ್ಲಿ ನವ ಭಾರತ ಸಾಕ್ಷರತಾ ಕಾರ್ಯಕ್ರಮ
0
ಸೆಪ್ಟೆಂಬರ್ 19, 2022