ಕಾಸರಗೋಡು: ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಪೆರಿಯ ಆಲಕ್ಕೋಡಿನ 'ಗೋಕುಲಂ'ಗೋಶಾಲೆ ಸಂದರ್ಶನ ಮತ್ತು ಗೋಮಯ ಉತ್ಪನ್ನಗಳ ಖರೀದಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿರುವ ವೋಕಲ್ ಫಾರ್ ಲೋಕಲ್ ಯೋಜನೆಯನ್ವಯ ಭೇಟಿ ಹಾಗೂ ಖರೀದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ಉಪಾಧ್ಯಕ್ಷ ಎಂ. ಬಾಲರಾಜ್, ಪ್ರಧಾನ ಕಾರ್ಯದರ್ಶಿ ವಿಜಯ್ ರೈ, ಜಿಲ್ಲಾ ಕಾರ್ಯದರ್ಶಿಗಳಾದ ಎನ್ ಮಧು, ಎಂ. ಉಮಾ, ಮಣಿಕಂಠ ರೈ, ಜಿಲ್ಲಾ ಸೆಲ್ ಕೋರ್ಡಿನೇಟರ್ ಎನ್. ಬಾಬುರಾಜ್, ಉದುಮ ಮಂಡಲ ಸಮಿತಿ ಕಾರ್ಯದರ್ಶಿ ಟಿ.ವಿ ಸಉರೇಶ್, ಯುವಮೋರ್ಚಾ ಜಿಲ್ಲಾ ಸಮಿತಿ ಅಧ್ಯಕ್ಷ ಧನಂಜಯ ಮಧೂರ್, ಯುವಮೋರ್ಚಾ ರಾಜ್ಯ ವನಿತಾ ಸಮಿತಿ ಕನ್ವೀನರ್ ಅಂಜು ಜೋಸ್ಟಿ, ಬೂತ್ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗೋಶಾಲೆಯಲ್ಲಿ ತಯಾರಿಸಲಾದ ವಿವಿಧ ಗೋಆಧಾರಿತ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸ್ವದೇಶಿ ಉತ್ಪನ್ನಗಳ ಮಾರಾಟ ಪ್ರೋತ್ಸಾಹಿಸುವ ಸಂದೇಶ ಸಾರಲಾಯಿತು.
ಸ್ವದೇಶಿ ಚಿಂತನೆ-ಬಿಜೆಪಿ ಜಿಲ್ಲಾ ಸಮಿತಿಯಿಂದ ಗೋಕುಲಂ ಗೋಶಾಲೆ ಭೇಟಿ, ಗೋಮಯ ಉತ್ಪನ್ನ ಖರೀದಿ
0
ಸೆಪ್ಟೆಂಬರ್ 19, 2022