ಕಾಸರಗೋಡು: ಪರಿಶಿಷ್ಟ ಜಾತಿ ಸಮುದಾಯದ ಕೃಷಿಕರ ಫಲಾನುಭವಿ ಗುಂಪು ರಚಿಸಿ ಇವರಿಗೆ ಜೇನು ಸಾಕಣಿಕೆ ಬಗ್ಗೆ ಸಮಗ್ರ ತರಬೇತಿ ನೀಡುವ ನಿಟ್ಟಿನಲ್ಲಿ ಗುಂಪು ಚರ್ಚೆ ಕಾಸರಗೋಡು ಸಿಪಿಸಿಆರ್‍ಐನಲ್ಲಿ ಜರುಗಿತು.
'ಬಾಮ್ಕೊ' ಅಧ್ಯಕ್ಷ ಹಾಗೂ ಸಹಕಾರ ಭಾರತಿ ಉಪಾಧ್ಯಕ್ಷ ಪಿ.ಆರ್.ಮುರಳೀಧರನ್ ಮುಖ್ಯ ಭಾಷಣ ಮಾಡಿ "ಎಫ್‍ಪಿಒ ರೂಪಿಸಲು ಈಗಾಗಲೇ ರಚಿಸಲಾದ ಕ್ಲಸ್ಟರ್‍ಗಳನ್ನು ವಿಸ್ತರಿಸುವ ಮೂಲಕ ಪರಿಶಿಷ್ಟ ಜಾತಿ ಕೃಷಿಕರ ಫಲಾನುಭವಿ ಗುಂಪನ್ನು 300 ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಐಸಿಎಆರ್-ಸಿಪಿಸಿಆರ್‍ಐ ನಿರ್ದೇಶಕಿ ಡಾ. ಅನಿತಾ ಕರುಣ್ ಅಧ್ಯಕ್ಷತೆ ವಹಿಸಿ ಮಾತನಡಿ, ಪರಿಶಿಷ್ಟ ಜಾತಿ ಉಪಯೋಜನೆಯ ಅನುದಾನವನ್ನು ಬಳಸಿಕೊಂಡು ಸಿಪಿಸಿಆರ್‍ಐ ವತಿಯಿಂದ ಜಿಲ್ಲೆಯ 60 ಎಸ್‍ಸಿ ಫಲಾನುಭವಿಗಳಿಗೆ ತಲಾ 15 ಜೇನುಗೂಡುಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಎಸ್‍ಸಿಎಸ್‍ಪಿ ಅಂಗವಾಗಿ ಜೇನು ಕೃಷಿಕರ ಸಮೂಹಗಳನ್ನು ರಚಿಸಲು ಸಿಪಿಸಿಆರ್‍ಐ ನಡೆಸಿದ ಚಟುವಟಿಕೆಗಳನ್ನು ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೆ.ಮುರಳೀಧರನ್ ಪ್ರಸ್ತುತಪಡಿಸಿದರು. ಆರೋಗ್ಯ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಜೇನುತುಪ್ಪದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದು, ಅವರ ಜನ್ಮದಿನದಂದು ಎಫ್‍ಪಿಒ ಚಟುವಟಿಕೆಗಳನ್ನು ಪ್ರಾರಂಭಿಸುವುದು ಅತ್ಯಂತ ಸೂಕ್ತವಾಗಿದೆ ಎಂದು ಡಾ. ಮುರಳೀಧರನ್ ತಿಳಿಸಿದರು.
ಈ ಸಂದರ್ಭ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕಾಸರಗೋಡು ರೂರಲ್ ಡೆವಲಪ್‍ಮೆಂಟ್ ಸೊಸೈಟಿಯ ಅಧ್ಯಕ್ಷ ಚಾರ್ಲಿ ಮ್ಯಾಥ್ಯೂ ಅವರು ಜೇನು ಸಾಕಾಣಿಕೆಯ ವಿವಿಧ ಅಂಶಗಳ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.
ಸಮಗ್ರ ಜೇನು ಕೃಷಿ ಬಗ್ಗೆ ಕಾಸರಗೋಡು ಸಿಪಿಸಿಆರ್‍ಐನಲ್ಲಿ ಗುಂಪು ಚರ್ಚೆ
0
ಸೆಪ್ಟೆಂಬರ್ 20, 2022
Tags