ಮಂಜೇಶ್ವರ : ಕಡಂಬಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಇತ್ತೀಚೆಗೆ ಶ್ರೀ ವಿಷ್ಣು ಯಕ್ಷಬಳಗ ಮಜಿಬೈಲು ತಂಡದ ಜಾಂಬವತಿ ಕಲ್ಯಾಣ ತಾಳಮದ್ದಳೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಶುಭಾನಂದ ಶೆಟ್ಟಿ ಕುಳೂರು, ಚೆಂಡೆ ಮದ್ದಳೆಯಲ್ಲಿ ರಾಮದಾಸ ಶೆಟ್ಟಿ ವಗೆನಾಡು, ಶಿವಶರಣ ತಾಳ್ತಜೆ, ಚಕ್ರತಾಳದಲ್ಲಿ ಶಂಕರನಾರಾಯಣ ತಾಳ್ತಜೆ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಮಮತಾ ನಾವಡ ಮಜಿಬೈಲು(ಜಾಂಬವಂತ), ಗೋಪಾಲಕೃಷ್ಣ ನಾಯಕ್ ಎಡನಾಡು(ಶ್ರೀಕೃಷ್ಣ), ದಾಮೋದರ ಶೆಟ್ಟಿ ಮಜಿಬೈಲು ಹಾಗೂ ಯೋಗೀಶ ರಾವ್ ಚಿಗುರುಪಾದೆ(ಬಲರಾಮ), ಹರೀಶ ನಾವಡ ಮಜಿಬೈಲು(ನಾರದ)ಪಾತ್ರಗಳನ್ನು ನಿರ್ವಹಿಸಿದರು.
ಕಡಂಬಾರು ದೇವಸ್ಥಾನದಲ್ಲಿ ಶ್ರೀ ವಿಷ್ಣು ಯಕ್ಷಬಳಗ ಮಜಿಬೈಲು ತಂಡದ ಜಾಂಬವತಿ ಕಲ್ಯಾಣ ತಾಳಮದ್ದಳೆ
0
ಸೆಪ್ಟೆಂಬರ್ 07, 2022