ಕಾಸರಗೋಡು: ಧಾರ್ಮಿಕ, ಸಾಂಸ್ಕøತಿಕ ಕ್ಷೇತ್ರದ ಮುಂದಾಳು, ವೆಂಕಟ್ರಮಣ ಹೊಳ್ಳ ಕಾಸರಗೋಡು ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಕೊಡಮಾಡುವ "ಭಜನಾ ಸಾಧಕ ಪುರಸ್ಕಾರ'ವನ್ನು ಪ್ರದಾನ ಮಾಡಲಾಯಿತು.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನೇತೃತ್ವದಲ್ಲಿ 'ಅಮೃತ ವರ್ಷಿಣಿ'ಸಭಾಭವನದಲ್ಲಿ ಶುಕ್ರವಾರ ನಡೆದ 24ನೇ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡ. ಡಿ.ವೀರೇಂದ್ರ ಹೆಗ್ಗಡೆ ಅವರು ಪುರಸ್ಕಾರ ಪ್ರದಾನ ಮಾಡಿದರು. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, , ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಬೆಂಗಳೂರು ಇಸ್ಕಾನ್‍ನ ಶ್ರೀರಾಮಪ್ರಭು ಚಂದ್ರದಾಸ ಸ್ವಾಮೀಜಿ, ಮಾತೃಶ್ರೀ ಡಾ. ಹೇಮಾವತೀ ವಿ.ಹೆಗ್ಗಡೆ ಉಪಸ್ಥಿತರಿದ್ದರು.
ವೆಂಕಟ್ರಮಣ ಹೊಳ್ಳ ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾಪರಿಷತ್‍ನ ಕಾಸರಗೋಡು ವಲಯ ಅಧ್ಯಕ್ಷರಾಗಿ, ಖ್ಯಾತ ಭಜನ ಸಂಕೀರ್ತನಾಕರರಾದ ರಾಮಕೃಷ್ಣ ಕಾಟುಕುಕ್ಕೆ ಹಾಗೂ ಜಯಾನಂದ ಕುಮಾರ್ ಹೊಸದುರ್ಗ ಅವರೊಂದಿಗೆ "ಭಜನಾ ಅಭಿಮಾನ ಅಭಿಯಾನ;ಕಾರ್ಯಕ್ರಮವನ್ನು ವಿವಿಧ ಕ್ಷೇತ್ರ ಹಾಗೂ ಮನೆಗಳಲ್ಲಿ ನಡೆಸಿಕೊಂಡು ಬಂದಿರುವುದಲ್ಲದೆ, ದೈವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವಗಳಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.
ವೆಂಕಟ್ರಮಣ ಹೊಳ್ಳರಿಗೆ "ಭಜನಾ ಸಾಧಕ ಪುರಸ್ಕಾರ'ಪ್ರದಾನ
0
ಸೆಪ್ಟೆಂಬರ್ 24, 2022