ಕಣ್ಣೂರು: ಪಿ.ಎಫ್.ಐ ಕಾರ್ಯಕರ್ತರ ಮೇಲಿನ ಬೇಟೆ ಮುಂದುವರಿದಿದ್ದು ಸೋಮವಾರ ಕೇಂದ್ರಗಳ ಮೇಲೆ ಮತ್ತೆ ಪೆÇಲೀಸರು ದಾಳಿ ನಡೆಸಿದ್ದಾರೆ. ಪಯ್ಯನ್ನೂರು ರಾಮಂತಳಿಯಲ್ಲಿರುವ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ.
ಹರತಾಳ ದಿನದಂದು ಅಂಗಡಿ ಮುಂಗಟ್ಟು ಬಂದ್ ಮಾಡುವುದಾಗಿ ಬೆದರಿಕೆ ಹಾಕಿದವರ ಮನೆಗಳ ಮೇಲೆ ದಾಳಿ ನಡೆದಿದೆ.
ಎನ್‍ಐಎ ದಾಳಿ ಬಳಿಕ ಜಿಲ್ಲೆಯ ಪಾಪ್ಯುಲರ್ ಫ್ರಂಟ್ ಕೇಂದ್ರಗಳ ಮೇಲೆ ಪೆÇಲೀಸರು ಮೂರನೇ ಬಾರಿ ದಾಳಿ ನಡೆಸಿದ್ದಾರೆ. ಭಾನುವಾರ ಕಣ್ಣೂರಿನ ಬಿ ಮಾರ್ಟ್ ಗೆ ಸಂಬಂಧಿಸಿದ 4 ಕೇಂದ್ರಗಳಲ್ಲಿ ತಪಾಸಣೆ ನಡೆಸಿ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಫೆÇೀನ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ನಿನ್ನೆ ಬೆಳಗ್ಗೆ ಮಟ್ಟನ್ನೂರಿನ ಫಾತಿಮಾಸ್ ಎಂಬ ಫರ್ನಿಚರ್ ಅಂಗಡಿ ಮೇಲೂ ಪೆÇಲೀಸರು ದಾಳಿ ನಡೆಸಿದ್ದಾರೆ. ಕೂತುಪರಂಬ್ ಎಸಿಪಿ ಪ್ರದೀಪನ್ ಕನ್ನಿಪೆÇಯಿಲ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಹರತಾಳದ ದಿನ ಕಣ್ಣೂರು ಜಿಲ್ಲೆಯಲ್ಲಿ ವ್ಯಾಪಕ ಹಿಂಸಾಚಾರದ ಘಟನೆಗಳು ನಡೆದಿತ್ತು. ಈ ಎಲ್ಲಾ ಹಿಂಸಾಚಾರಗಳು ಒಂದೇ ಮಾದರಿಯನ್ನು ಹೊಂದಿದ್ದು, ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಪೆÇಲೀಸರು ಸ್ಪಷ್ಟಪಡಿಸಿದ್ದಾರೆ. ಪಾಪ್ಯುಲರ್ ಫ್ರಂಟ್ ನ ಕೆಲವು ಕೇಂದ್ರಗಳಲ್ಲಿ ಈ ಸಂಚು ನಡೆದಿದ್ದು, ಹಿಂಸಾಚಾರಕ್ಕೆ ಈ ಸ್ಥಳಗಳಿಂದ ಹಣ ಸಿಕ್ಕಿದೆ ಎಂಬ ಮಾಹಿತಿ ಪೆÇಲೀಸರಿಗೆ ಸಿಕ್ಕಿತ್ತು.
ಹರತಾಳದ ದಿನ ಕಣ್ಣೂರಿನಲ್ಲಿ ವ್ಯಾಪಕ ಹಿಂಸಾಚಾರ ನಡೆದಿದ್ದು, ಪಾಪ್ಯುಲರ್ ಫ್ರಂಟ್ ಕಣ್ಣೂರಿನಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಮುಂದಾಗಿದೆ ಎಂಬುದಕ್ಕೆ ಇದು ಸೂಚನೆ ಎಂದು ಪರಿಗಣಿಸಲಾಗಿದೆ.
ಕಣ್ಣೂರಿನಲ್ಲಿ ಪಾಪ್ಯುಲರ್ ಫ್ರಂಟ್ ದಾಳಿಕೋರರ ಮನೆ ಮೇಲೆ ಮತ್ತೆ ದಾಳಿ; ಭಯೋತ್ಪಾದನೆಯ ಅಕ್ಟೋಪಸ್‍ನ ಕೈಗಳ ಹುಡುಕಾಟದಲ್ಲಿ ಪೋಲೀಸರು
0
ಸೆಪ್ಟೆಂಬರ್ 26, 2022