ಕುಂಬಳೆ : ಶ್ರೀ ನರೇಂದ್ರ ಮೋದಿಜಿಯವರ ಹುಟ್ಟುಹಬ್ಬದ ಪ್ರಯುಕ್ತ ಸೆ. 17 ರಿಂದ ಅಕ್ಟೋಬರ್ 2 ರ ವರೆಗೆ ವಿವಿಧ ಕಾರ್ಯಕ್ರಮಗಳು ಸೇವಾ ಪ್ರಾಕ್ಷಿಕ ಎಂಬ ಅಡಿಯಲ್ಲಿ ಕುಂಬಳೆಯ ಪಕ್ಷದ ಕಚೇರಿ ಮುಂಭಾಗದಲ್ಲಿ ಮೋದಿಯವರ ಇತಿಹಾಸ ಮತ್ತು ಸಾಧನೆಗಳ ಕುರಿತು ಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆಯನ್ನು ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಅವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಕುಂಬಳೆ ಪಂಚಾಯತಿ ಅಧ್ಯಕ್ಷ ಸುಜಿತ್ ರೈ ವಹಿಸಿದರು. ಈ ಸಂದರ್ಭದಲ್ಲಿ ಪಕ್ಷದ ನೇತಾರರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕುಂಬಳೆಯಲ್ಲಿ ಪ್ರಧಾನಿ ಸಾಧನೆಗಳ ಚಿತ್ರ ಪ್ರದರ್ಶನ
0
ಸೆಪ್ಟೆಂಬರ್ 20, 2022