ಕೋಝಿಕ್ಕೋಡ್: ಭಾರತ್ ಜೋಡೋ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಎತ್ತಿದ ಘೋಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತ್ ಜೋಡೋ ರಾಹುಲ್ ಗಾಂಧಿ ಎಂದು ಹೇಳುವ ಬದಲು ಅವರು ಭಾರತ್ ಚೋಟೋ ರಾಹುಲ್ ಗಾಂಧಿ ಎಂದು ಸಾರ್ವಜನಿಕವಾಗಿ ನೀಡಿರುವ ಘೋಷಣೆ ವೈರಲ್ ಆಗಿದೆ.
ಘೋಷಣೆ ಕೂಗಿದ ಕೆಲವರು ಭಾರತ್ ಜೋಡೋ ಎಂದು ತಿದ್ದಿಕೊಂಡರೂ ತಪ್ಪಿನ ಅರಿವಾಗದೆ ಸಂಸದರು ಮತ್ತೆ ಮತ್ತೆ ಘೋಷಣೆ ಮೊಳಗಿಸಿದರು. ಬಹುತೇಕರು ತಪ್ಪಿನ ಅರಿವಿಲ್ಲದೆ ಘೋಷಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.
ಲೋಕಸಭೆಗೆ ತೆರಳುವ ಸಂಸದರಿಗೆ ಛೋಟೋ, ಜೋಡೋ ಅರ್ಥ ಗೊತ್ತಿಲ್ಲವಾ ಎಂದು ಹಲವರು ಕೇಳುತ್ತಿದ್ದಾರೆ. ಹಿಂದಿ ಜ್ಞಾನವಿರುವ ಕೋಡಿಕುನ್ನಿಲ್ ಅವರು ರಾಹುಲ್ ಗೆ ಬೇಜಾರಾಗಿ ಹೇಳುತ್ತಿರುವುದು ತಪ್ಪಲ್ಲ ಎಂದು ಟ್ರೋಲ್ ಗಳು ಹರಿದಾಡುತ್ತಿವೆ.
ಈ ನಡುವೆ ರಾಹುಲ್ ಅವರ ಭಾರತ್ ಜೋಡೋ ಯಾತ್ರೆ ಇಂದು ಕರ್ನಾಟಕ ಪ್ರವೇಶಿಸಿದೆ. 21 ದಿನಗಳ ಕಾಲ ಕರ್ನಾಟಕ ಪ್ರವಾಸ ನಡೆಯಲಿದೆ. ಏಳು ಜಿಲ್ಲೆಗಳ ಮೂಲಕ ಕಾಲ್ನಡಿಗೆಯಲ್ಲಿ 511 ಕಿ.ಮೀ ಕ್ರಮಿಸಲಾಗುವುದು.
ತಪ್ಪಿ ಘೋಷಣೆ ಕೂಗಿದ ಸಂಸದ ಕೂಡಿಕುನ್ನಿಲ್: ವೈರಲ್ ಆದ ಘೋಷಣೆ
0
ಸೆಪ್ಟೆಂಬರ್ 30, 2022