ತಿರುವನಂತಪುರ: ಪಿ.ಎಫ್.ಐ ಕರೆನೀಡಿದ್ದ ಹರತಾಳಕ್ಕೆ ಸಂಬಂಧಿಸಿದಂತೆ ಕೆಎಸ್‍ಆರ್‍ಟಿಸಿ ಬಸ್‍ಗಳಿಗೆ ಹಾನಿ ಮಾಡಿದವರಿಂದ ಪರಿಹಾರ ಸಂಗ್ರಹಿಸಲಾಗುವುದು ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಸಾರ್ವಜನಿಕ ಆಸ್ತಿ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳವುದರಲ್ಲಿ ಮುಲಾಜುಗಳಿಲ್ಲ. ಕಾನೂನು ಪ್ರಕಾರ ಕಾನೂನು ಪ್ರಕ್ರಿಯೆಗಳ ಮೂಲಕ ಸಂಬಂಧಪಟ್ಟ ವ್ಯಕ್ತಿಗಳಿಂದ ಪರಿಹಾರವನ್ನು ಸಂಗ್ರಹಿಸಲಾಗುವುದು ಎಂದು ಸಚಿವರು ಹೇಳಿದರು.
ಸಾರ್ವಜನಿಕರು ತಮ್ಮ ಪ್ರಯಾಣ ಸೌಲಭ್ಯವನ್ನು ಕಳೆದುಕೊಳ್ಳದಂತೆ ಕೆಎಸ್‍ಆರ್‍ಟಿಸಿ ಸೇವೆಯನ್ನು ನಡೆಸಿದ್ದರೂ, ರಾಜ್ಯದ ಹಲವೆಡೆ ಬಸ್‍ಗಳ ಮೇಲೆ ಕಲ್ಲು ತೂರಾಟ ಮತ್ತು ಹಿಂಸಾಚಾರದ ಘಟನೆಗಳು ನಡೆದಿವೆ. ಹರತಾಳಕ್ಕೆ ಸಂಬಂಧಿಸಿದಂತೆ ಪೆÇಲೀಸರ ನೆರವಿನೊಂದಿಗೆ ಗರಿಷ್ಠ ಸೇವೆಗಳನ್ನು ನಡೆಸುವಂತೆ ಸೂಚನೆ ನೀಡಲಾಗಿತ್ತು ಎಂದು ಫೇಸ್ ಬುಕ್ ಪೆÇೀಸ್ಟ್ ನಲ್ಲಿ ಸಚಿವರು ತಿಳಿಸಿದ್ದಾರೆ.
ರಾಜ್ಯದಲ್ಲಿ ನಡೆದ ಹರತಾಳದ ಅಂಗವಾಗಿ ಕೆಎಸ್‍ಆರ್‍ಟಿಸಿಯ ಹಲವು ಬಸ್‍ಗಳು ಜಖಂಗೊಂಡಿವೆ. ಬಸ್ ಮುಂಭಾಗದ ಗಾಜು ಸೇರಿದಂತೆ ಬೆಲೆ ಬಾಳುವ ವಸ್ತುಗಳು ನಾಶವಾಗಿವೆ. ಹಲವೆಡೆ ಬಸ್ ಚಾಲಕರು ಮತ್ತು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.
ಇಂತಹ ಹಿಂಸಾಚಾರದಿಂದಾಗಿ ಹಲವು ಡಿಪೆÇೀಗಳಿಂದ ಹೊರಡುವ ಬಸ್‍ಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಾಯಿತು ಎಂದು ಸಚಿವ ಆಂಟನಿ ರಾಜು ತಿಳಿಸಿದ್ದಾರೆ. ಪೆÇಲೀಸರ ನೆರವಿನಿಂದ ಹಲವೆಡೆ ಕೆಎಸ್‍ಆರ್‍ಟಿಸಿ ಸೇವೆ ನಡೆಸಲಾಯಿತು. ಹರತಾಳಕ್ಕೆ ಸಂಬಂಧಿಸಿದಂತೆ ಆಗಿರುವ ಹಾನಿಯ ಬಗ್ಗೆ ಸ್ಪಷ್ಟ ಲೆಕ್ಕ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಮುಂದೆ ಇಂತಹ ಪ್ರಕರಣಗಳಲ್ಲಿ ಕೆಎಸ್‍ಆರ್‍ಟಿಸಿ ವಿರುದ್ಧ ಹಿಂಸಾಚಾರ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಎನ್‍ಐಎ ದಾಳಿಯನ್ನು ವಿರೋಧಿಸಿ ಪಾಪ್ಯುಲರ್ ಫ್ರಂಟ್ ಘೋಷಿಸಿದ್ದ ಹರತಾಳ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳ ಮೇಲೆ ವ್ಯಾಪಕ ದಾಳಿ ನಡೆದಿದೆ. ವಿವಿಧೆಡೆ ಪ್ರತಿಭಟನೆ ವೇಳೆ 70 ಕೆಎಸ್‍ಆರ್‍ಟಿಸಿ ಬಸ್‍ಗಳಿಗೆ ಹಾನಿಯಾಗಿದೆ ಎಂದು ಸರ್ಕಾರ ಹೈಕೋರ್ಟ್‍ಗೆ ತಿಳಿಸಿದೆ. ಕೆಎಸ್‍ಆರ್‍ಟಿಸಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಗೂ ಮುನ್ನ ಅಡ್ವೊಕೇಟ್ ಜನರಲ್ ಅವರು ಕೆಎಸ್‍ಆರ್‍ಟಿಸಿ ಬಸ್‍ಗಳ ಮೇಲಿನ ಹಿಂಸಾಚಾರದ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದರು.
'ಹರತಾಳದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳ ಮೇಲೆ ದಾಳಿ: ಚಾಲಕರು ಮತ್ತು ಪ್ರಯಾಣಿಕರಿಗೆ ಗಾಯ'; ಪರಿಹಾರ ವಸೂಲಿ ಮಾಡಲಾಗುವುದು ಎಂದ ಸಚಿವ ಆಂಟನಿ ರಾಜು
0
ಸೆಪ್ಟೆಂಬರ್ 23, 2022