ಮಂಜೇಶ್ವರ: ಕುಂಜತ್ತೂರಿನ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಸೃಷ್ಟಿಸಿದ ಜಾತಿ ಮತ ರಾಜಕೀಯ ಮರೆತು ಒಂದೇ ಧ್ಯೇಯದೊಂದಿಗೆ ರೂಪೀಕರಿಸಿದ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ನಿರಂತರವಾದ ಪ್ರಯತ್ನದಿಂದ ಎರಡು ಬೇಡಿಕೆಗಳ ಪೈಕಿ ಒಂದನ್ನು ಅಂಗೀಕರಿಸಿದ ರಾ.ಹೆದ್ದಾರಿ ಪ್ರಾಧಿಕಾರವು ಕುಂಜತ್ತೂರಿಗೆ ಅಂಡರ್ ಪಾಸ್ ನೀಡುವುದನ್ನು ಒಪ್ಪಿಕೊಂಡಿರುವುದಾಗಿ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ರವರು ಧರಣಿ ಸತ್ಯಾಗ್ರಹ ನಡೆಯುವ ವೇದಿಕೆಗೆ ಆಗಮಿಸಿ ಬಹಿರಂಗಪಡಿಸಿದ್ದಾರೆ.
ಆದರೆ ರಾ. ಹೆದ್ದಾರಿಯ ಇನ್ನೊಂದು ಬೇಡಿಕೆಯಾಗಿರುವ ಉದ್ಯಾವರದಲ್ಲೊಂದು ಅಂಡರ್ ಪಾಸ್ ಸಿಗುವ ತನಕ ಹೋರಾಟವನ್ನು ಮುಂದುವರಿಸಲಿರುವುದಾಗಿಯೂ ಹೋರಾಟ ಸಮಿತಿ ತೀರ್ಮಾನಿಸಿದೆ.
ಆದರೆ ಕುಂಜತ್ತೂರು ಅಂಡರ್ ಪಾಸ್ ಗೆ ಅನುಮತಿ ಲಭಿಸಿರುವುದಾಗಿ ಶಾಸಕರ ಹೇಳಿಕೆಯ ಬೆನ್ನಲ್ಲೇ ಕೆಲವೊಂದು ಅಂಧ ಭಕ್ತರು ಈ ವಿಷಯದಲ್ಲಿ ರಾಜಕೀಯ ಲಾಭವನ್ನು ಪಡೆಯಲು ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪಕ್ಷವೊಂದರ ಪೋಷಕ ಸಂಘಟನೆಯ ಹೆಸರಲ್ಲಿ ಪೋಟೋ ಲಗತ್ತಿಸಿ ವಿಜೃಂಭಿಸಿದ್ದು ವಿವಾದಕ್ಕೆ ಕಾರಣವಾಯಿತು. ಬಳಿಕ ಕುಂಜತ್ತೂರು ಮಾಸ್ಕೋ ಹಾಲ್ ನಲ್ಲಿ ಹೋರಾಟ ಸಮಿತಿಯ ತುರ್ತು ಸಭೆ ಸೇರಲಾಯಿತು. ರಾಜಕೀಯ ಲಾಭವನ್ನು ಪಡೆಯಲು ಯತ್ನಿಸಿದವರ ವಿರುದ್ಧ ಸಭೆಯಲ್ಲಿ ಭಾರೀ ಆಕ್ರೋಶ ಕೂಡಾ ವ್ಯಕ್ತವಾಯಿತು.
ಬಳಿಕ ರಾ. ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಸೈಪುಲ್ಲಾ ತಂಙಳ್ ಮಾತನಾಡಿ ಈ ವಿಷಯದಲ್ಲಿ ರಾ. ಹೆದ್ದಾರಿ ಹೋರಾಟ ಸಮಿತಿ ಹೊರತುಪಡಿಸಿ ಬೇರೆ ಯಾರೂ ಇದರ ಲಾಭ ಪಡೆಯಬೇಕಾಗಿಲ್ಲ. ಆ ರೀತಿ ವಿಜ್ರಂಭಿಸಿರುವುದು ಖಂಡನೀಯ ಎಂದು ಅಂಧ ಭಕ್ತರಿಗೆ ತಿರುಗೇಟು ನೀಡಿದರು. ಜೊತೆಗೆ ಕುಂಜತ್ತೂರಿನಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹವನ್ನು ಮುಕ್ತಾಯಗೊಳಿಸಿರುವುದಾಗಿಯೂ ಉದ್ಯಾವರದಲ್ಲೊಂದು ಅಂಡರ್ ಪಾಸ್ ಸಿಗುವಂತೆ ಮುಂದಿನ ಹೋರಾಟಕ್ಕೆ ಸಜ್ಜಾಗಲಿರುವುದಾಗಿಯೂ ತಿಳಿಸಿದ್ದಾರೆ.
ಈ ಸಂದರ್ಭ ಹೋರಾಟ ಸಮಿತಿ ನೇತಾರರು ಸೇರಿದಂತೆ ಹಲವರು ಪಾಲ್ಗೊಂಡರು.
ರಾ.ಹೆದ್ದಾರಿ ಹೋರಾಟಕ್ಕೆ ಭಾಗಶಃ ಯಶ: ಕುಂಜತ್ತೂರಲ್ಲಿ ಅಂಡರ್ ಪಾಸ್ ನಿರ್ಮಿಸಲು ಒಪ್ಪಿಗೆ
0
ಸೆಪ್ಟೆಂಬರ್ 20, 2022
Tags