ಪೆರ್ಲ: ಸ್ವರ್ಗ ಸ್ವಾಮೀ ವಿವೇಕಾನಂದ ಎಯುಪಿ. ಶಾಲೆಯ ವತಿಯಿಂದ ಶಿಕ್ಷಕ ದಿನಾಚರಣೆ ಅಂಗವಾಗಿ ವಾಣೀನಗರ ಸÀರ್ಕಾರಿ ಶಾಲೆಯ ನಿವೃತ್ತ ಶಿಕ್ಷಕ ವಿಷ್ಣು ಭಟ್ ಅಜಕ್ಕಳಮೂಲೆ ಮತ್ತು ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣ ಕಡಂಬಳಿತ್ತಾಯ ಅವರ ಮನೆಗೆ ತೆರಳಿ ಶಿಕ್ಷಕ ದಿನಾಚರಣೆಯ ಶುಭಾಶಯ ತಿಳಿಸಿ ಶಾಲು ಹೊದಿಸಿ, ಹಣ್ಣುಹಂಪಲು ತೆಂಗಿನ ಕಾಯಿ, ವೀಳ್ಯ ನೀಡಿ ಗೌರವಿಸಲಾಯಿತು.ಮುಖ್ಯ ಶಿಕ್ಷಕಿ ಗೀತಾ ಕುಮಾರಿ, ಶಿಕ್ಷಕರಾದ ಪದ್ಮನಾಭ, ವೆಂಕಟ ವಿದ್ಯಾಸಾಗರ್, ಗೀತಾಂಜಲಿ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.
ಶಿಕ್ಷಕ ದಿನಾಚರಣೆ: ಸ್ವರ್ಗ ಶಾಲೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ
0
ಸೆಪ್ಟೆಂಬರ್ 07, 2022