ಕಾಸರಗೋಡು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ(ಪಿ.ಎಫ್.ಐ)ಮೇಲೆ ನಿಷೇಧ ಜಾರಿಗೆ ಬರುತ್ತಿದ್ದಂತೆ ಈ ಸಂಘಟನೆ ಸದಸ್ಯರ ಸಹಾಯದಿಂದ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಐಕ್ಯ ಹಾಗೂ ಎಡರಂಗ ಅವರೊಳಗಿನ ಸಂಬಂಧ ತಕ್ಷಣದಿಂದ ಕಡಿದುಕೊಳ್ಳಬೇಕು ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಕೋರ್ ಕಮಿಟಿ ಸಮಿತಿ ಆಗ್ರಹಿಸಿದೆ.
ಮಂಜೇಶ್ವರ ಬ್ಲಾಕ್ ಪಂಚಾಯಿತಿಯಲ್ಲಿ ಎಸ್‍ಡಿಪಿಐ ಬೆಂಬಲದೊಂದಿಗೆ ಮುಸ್ಲಿಂಲೀಗ್ ಆಡಳಿತ ನಡೆಸುತ್ತಿದ್ದರೆ, ಕಾಞಂಗಾಡು ನಗರಸಭೆಯಲ್ಲಿ ಪಾಪ್ಯುಲರ್ ಫ್ರಂಟ್‍ನ ಪೋಷಕ ಸಂಘಟನೆ ರಿಹಾಬ್ ಇಂಡಿಯಾ ಫೌಂಡೇಶನ್ ನೇತೃತ್ವದಲ್ಲಿರುವ ಐಎನ್ನೆಲ್ ಮೈತ್ರಿಯೊಂದಿಗೆ ಎಡರಂಗ ಆಡಳಿತ ನಡೆಸುತ್ತಿದೆ. ಅಜನೂರ್, ಕುಂಬಳೆ ಸೇರಿದಂತೆ ಜಿಲ್ಲೆಯ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಎಸ್‍ಡಿಪಿಐ ಜತೆ ಕೈಜೋಡಿಸಿ ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಆಡಳಿತ ನಡೆಸುತ್ತಿದೆ. ನಿಷೇಧಿತ ಸಂಘಟನೆಯೊಂದರ ಬೆಂಬಲದೊಂದಿಗೆ ಆಡಳಿತ ಹಂಚಿಕೊಂಡಿರುವ ಉಭಯ ರಂಗಗಳು ತಕ್ಷಣ ಈ ಸಂಬಂಧ ಕಡಿದುಕೊಳ್ಳಬೇಕು. ನಿಷೇಧಿತ ಉಗ್ರಗಾಮಿ ಸಂಘಟನೆಗಳೊಂದಿಗೆ ಆಡಳಿತ ಮುಂದುವರಿಸಿದಲ್ಲಿ ಬಿಜೆಪಿ ಪ್ರಬಲ ಹೋರಾಟಕ್ಕೆ ಮುಂದಾಗುವುದಾಗಿ ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸಮಿತಿ ಕಾರ್ಯದರ್ಶೀ ಕೆ. ಶ್ರೀಕಾಂತ್, ಪಿ. ಸುರೇಶ್ ಕುಮಾರ್ ಶೆಟ್ಟಿ, ಜಿ. ಕಾಶೀನಾಥ್, ಎ.ವೇಲಾಯುಧನ್, ವಿಜಯ್ ಕುಮಾರ್ ರೈ ಉಪಸ್ಥಿತರಿದ್ದರು.
ನಿಷೇಧಿತ ಸಂಘಟನೆ ಸಹಕಾರದ ಆಡಳಿತ ಕೊನೆಗೊಳಿಸಲು ಉಭಯ ರಂಗ ತಯಾರಾಗಬೇಕು: ಬಿಜೆಪಿ
0
ಸೆಪ್ಟೆಂಬರ್ 29, 2022
Tags