ಕುಂಬಳೆ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಶಾಲಾಮಕ್ಕಳ 'ಪ್ರತಿಭಾ ಭಾರತೀ' ಕಾರ್ಯಕ್ರಮ ಗುರುವಾರ ನೆರವೇರಿತು. ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿ ಜತನ್ ಸಿ.ವಿ ಅಧ್ಯಕ್ಷತೆ ವಹಿಸಿದನು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮುರಳೀಧರ ಯಾದವ್ ನಾಯ್ಕಾಪು ಮಾತನಾಡಿ ಮಕ್ಕಳ ದೇಹಕ್ಕೆ ಹೊಡೆಯದೆ ಅವರ ಮನಸ್ಸಿಗೆ ನಾಟುವ ರೀತಿಯಲ್ಲಿ ಬೋಧಿಸುವಂತೆ ಅಧ್ಯಾಪಕರು ಪ್ರಯತ್ನಿಸಬೇಕು ಎಂಬ ಕರೆನೀಡಿದರು. ಮುಖ್ಯೋಪಾಧ್ಯಾಯ ಶ್ಯಾಂಭಟ್ ದರ್ಭೆಮಾರ್ಗ ಹಾಗೂ ಆಡಳಿತ ಸಮಿತಿ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಉಪಸ್ಥಿತರಿದ್ದು ಹಿತನುಡಿಗಳನ್ನಾಡಿದರು. ಕು.ಧೀಕ್ಷಾ ಆರ್.ಕೆ. ಹಾಗೂ ತೇಜಸ್ಸ್ ನಿರೂಪಣೆಗೈದರು. ಕು. ಧೀಕ್ಷಿತಾ ಸ್ವಾಗತಿಸಿ, ಪ್ರಾಪ್ತಿಕ್ ವಂದಿಸಿದರು.
ಮಕ್ಕಳ ದೇಹಕ್ಕಲ್ಲ ಮನಸ್ಸಿಗೆ ನಾಟುವ ಶಿಕ್ಷಣ ಬೇಕು: ಮುರಳೀಧರ ಯಾದವ್ ನಾಯ್ಕಾಪು
0
ಸೆಪ್ಟೆಂಬರ್ 30, 2022
Tags