HEALTH TIPS

ನಾಲಂದದಲ್ಲಿ ಎನ್.ಎಸ್.ಎಸ್ ದಿನಾಚರಣೆ


                ಪೆರ್ಲ: ನಾಲಂದ ಕಾಲೇಜು ಪೆರ್ಲ ಎನ್ ಎಸ್ ಎಸ್ ದಿನಾಚರಣೆಯ ಪ್ರಯುಕ್ತ ಕಾಲೇಜಿನ ಎನ್ ಎಸ್ ಎಸ್ ಯುನಿಟ್ ನಂಬರ್ 49 ರ ವತಿಯಿಂದ ಉಕ್ಕಿನಡ್ಕ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
          ಕಾರ್ಯಕ್ರದಲ್ಲಿ ಕಾಲೇಜಿನ ರಕ್ಷಕ  ಶಿಕ್ಷಕ ಸಂಘದ  ಅಧ್ಯಕ್ಷ  ನಾರಾಯಣ ನಾಯ್ಕ್ ರವರು ಪಾಲ್ಗೊಂಡಿದ್ದರು. ಎನ್ ಎಸ್ ಎಸ್ ಯೋಜನಾಧಿಕಾರಿ ಪ್ರಜಿತ್ ರವರ ನೇತೃತ್ವದಲ್ಲಿ ಈ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು. ಎನ್ ಎಸ್ ಎಸ್ ವಿದ್ಯಾರ್ಥಿಗಳು ಉಕ್ಕಿನಡ್ಕ ಪರಿಸರದಲ್ಲಿರುವ ತ್ಯಾಜ್ಯ ವಸ್ತ್ರಗಳನ್ನು, ಪೊದೆಗಳನ್ನು ತೆರವುಗೊಳಿಸಿ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ಈ ಮೂಲಕ ಕಾಲೇಜಿನ ಎನ್ ಎಸ್ ಎಸ್ ತಂಡವು ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಕ್ಕಿನಡ್ಕ ಅಯ್ಯಪ್ಪ ಭಜನಾ ಮಂದಿರದ ವತಿಯಿಂದ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries