ಬದಿಯಡ್ಕ: ಮುಂಡಿತ್ತಡ್ಕ ವಿಷ್ಣುನಗರದ ವಿಷ್ಣು ಕಲಾವೃಂದದ ನೇತೃತ್ವದಲ್ಲಿ ವಿಷ್ಣು ನಗರ ಕ್ರಿಕೆಟರ್ಸ್ ಇದರ ಸಹಯೋಗದೊಂದಿಗೆ ಓಣಂ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ಭಾನುವಾರ ಶ್ರೀ ಮಹಾವಿಷ್ಣು ಭಜನಾ ಮಂದಿರ ಪರಿಸರದಲ್ಲಿ ನಡೆಯಿತು. ಬೆಳಗ್ಗೆ 9.ರಿಂದ ಮಕ್ಕಳಿಗೆ ಮತ್ತು ಸಾರ್ವಜನಿಕರಿಗಾಗಿ ಲಿಂಬೆ ಚಮಚ, ಬಲೂನ್, ಮಡಕೆ ಹೊಡೆಯುವ, ಇಟ್ಟಿಗೆ ಎತ್ತುವ ಸ್ಪರ್ಧೆಗಳು ಜರಗಿತು.
ಸಂಜೆ 6 ಕ್ಕೆ ಸಾರ್ವಜನಿಕರ ಏಳು ಸದಸ್ಯರ ತಂಡದ ಮುಕ್ತ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು. ಹಗ್ಗ ಜಗ್ಗಾಟ ವಿಜೇತ ತಂಡವಾಗಿ ಶ್ರೀಶಾಸ್ತಾ ಕೃಪ ವೀರಾಂಜನೇಯ(ಎ) ಪ್ರಥಮ ಬಹುಮಾನ 3333 ರೂ.ಹಾಗೂ ಟ್ರೋಫಿಯನ್ನು ಪಡೆದರೆ, ದ್ವಿತೀಯ 2222 ರೂ ಹಾಗೂ ಟ್ರೋಫಿಯನ್ನು ಶ್ರೀಮಹಿಷಮರ್ದಿನಿ ತಂಡ ಮೂಡಂಬೈಲ್ ತಂಡ ಪಡೆದುಕೊಂಡಿತು. ತೃತೀಯ ಟ್ರೋಫಿಯನ್ನು ಶ್ರೀ ಶಾಸ್ತಾ ಕೃಪ ವೀರಾಂಜನೇಯ ತಂಡ(ಬಿ) ಕಡಂಬಾರ್ ಮತ್ತು ಚತುರ್ಥ ಟ್ರೋಫಿಯನ್ನು ಫ್ರೆಂಡ್ಸ್ ಪಜ್ಜಾನ ತಂಡ ಪಡೆದುಕೊಂಡಿತು. ಪಂದ್ಯಾಟಕ್ಕೆ ತೀರ್ಪುಗಾರರಾಗಿ ಪ್ರಸಾದ್ ರೈ ಮುಗು ಮತ್ತು ಅಕ್ಷಿತ್ ಚೇವ ಸಹಕರಿಸಿದರು. ಸಂಘದ ಹಿರಿಯ ಸದಸ್ಯ ಸುಂದರ ಕಟ್ನಡ್ಕ ನಿರೂಪಕರಾಗಿ ಸಹಕರಿಸಿದರು. ಸಂಘದ ಹಿರಿಯ ಹಾಗೂ ಕಿರಿಯ ಸದಸ್ಯರು ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.