ಕಾಸರಗೋಡು: ಕೃಷಿಭೂಮಿಗೆ ಡ್ರೋನ್ ಬಳಸಿ ಔಷಧ ಸಿಂಪಡಣಾ ತರಬೇತಿಗೆ ಕೃಷಿ ಇಲಾಖೆ ಚಾಲನೆ ನೀಡಿದೆ. ಕೃಷಿ ಇಲಾಖೆ ಅಧೀನದಲ್ಲಿ ಅನುಷ್ಠಾನಗೊಳಿಸಲಾದ ಕೇಂದ್ರಾವಿಷ್ಕøತ ಯೋಜನೆ ಸಬ್ಮಿಶನ್ ಆನ್ ಅಗ್ರಿಕಲ್ಚರಲ್ ಮೆಕನೈಸೇಶನ್ ಅಂಗವಾಗಿ ತರಬೇತಿ ಆಯೋಜಿಸಲಾಗುತ್ತಿದೆ.
ಭತ್ತದ ಗದ್ದೆಗಳು ಹೆಚ್ಚಿನ ಪ್ರಮಾಣದಲ್ಲಿರುವ ಪ್ರದೇಶದಲ್ಲಿ ಭತ್ತದ ಸಸಿಗಳಿಗೆ ರೋಗ ಬಾಧಿಸಿದ್ದಲ್ಲಿ, ಅದನ್ನು ಸುಲಭವಾಗಿ ಪತ್ತೆ ಹಚ್ಚಿ ಡ್ರೋನ್ ಬಳಸಿ ಅಗತ್ಯ ಔಷಧಗಳನ್ನು ಸಿಂಪಡಿಸಬಹುದಾಗಿದೆ. ಒಂದು ಎಕರೆ ಹೊಲಕ್ಕೆ ಎಂಟು ನಿಮಿಷದಲ್ಲಿ ಔಷಧಿ ಸಿಂಪಡಿಸಬಹುದಾಗಿದೆ. ಕೃಷಿ ವಲಯದಲ್ಲಿ ಸಿಂಪಡಣೆಗೆ ಕೂಲಿಕಾರ್ಮಿಕರು ಲಭ್ಯವಾಗದೆ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಯಾಂತ್ರೀಕೃತ ಸಿಂಪಡಣೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಕೃಷಿ ಇಲಾಖೆ ಅಭಿಪ್ರಾಯ.
ಪುಲ್ಲೂರು ಸೀಡ್ ಫಾರ್ಮ್ ನಲ್ಲಿ ನಡೆದ ಕೃಷಿ ಡ್ರೋನ್ ಪ್ರದರ್ಶನ ತರಬೇತಿಯನ್ನು ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂದನ್ ಉದ್ಘಾಟಿಸಿದರು. ಪಂಚಾಯಿತಿ ಅಧ್ಯಕ್ಷ ಸಿ.ಕೆ.ಅರವಿಂದಾಕ್ಷನ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಸಿ.ಕೆ.ಮೋಹನನ್ ವರದಿ ಮಂಡಿಸಿದರು. ಪಂಚಾಯಿತಿ ಸದಸ್ಯರಾದ ಎಂ.ವಿ.ನಾರಾಯಣನ್, ಟಿ.ವಿ.ಕರಿಯನ್ ಮತ್ತು ಬಂಗಳಂ ಕುಞÂಕೃಷ್ಣನ್ ಮಾತನಾಡಿದರು. ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ ಸ್ವಾಗತಿಸಿದರು. ಕೃಷಿ ಸಹಾಯಕ ಕಾರ್ಯಪಾಲಕ ಅಭಿಯಂತರ ಎ.ಭಾಸ್ಕರನ್ ವಂದಿಸಿದರು.
ಭತ್ತದ ಕೃಷಿಗೆ ಡ್ರೋಣ್ ಬಳಸಿ ಔಷಧ ಸಿಂಪಡಣೆ: ತರಬೇತಿಗೆ ಚಾಲನೆ
0
ಸೆಪ್ಟೆಂಬರ್ 14, 2022