ಪೆರ್ಲ: ಓಣಂ ಹಬ್ಬ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡುತ್ತದೆ ಎಂದು ಜಿಲ್ಲಾ ಗ್ರಂಥಾಲಯ ಸಮಿತಿಯ ಸದಸ್ಯ ಉದಯ ಸಾರಂಗ್ ಹೇಳಿದರು.
ನಲ್ಕದ ಭಗತ್ ಸಿಂಗ್ ಸಾರ್ವಜನಿಕ ಗ್ರಂಥಾಲಯ ವತಿಯಿಂದ ನಡೆದ ಓಣಂ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹಿಂದಿನ ಚರಿತ್ರೆ ಓದುವ ಹವ್ಯಾಸ ಬೆಳೆಸಿ ಸರಿಯಾದ ಮತ್ತು ತಪ್ಪಾದ ನಿಲುವು ತಿಳಿಯಲು ಗ್ರಂಥಾಲಯದ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು ಎಂದು ಅವರು ಸಲಹೆಯಿತ್ತರು. ಶಿಕ್ಷಕ ಶ್ರೀಧರ ಭಟ್ ಓಣಂ ಹಬ್ಬದ ಹಿನ್ನೆಲೆ ವಿವರಿಸಿದರು. ವಿವಿಧ ವರ್ಣದ ಹೂಗಳ ಎಸಳುಗಳು ಹಲವು ರೀತಿಯ ಸುಂದರ ಚಿತ್ತಾರ ಮೂಡಿಸುವ ರೀತಿ ಸಮಾಜದಲ್ಲಿ ವೈವಿಧ್ಯಮಯ ಸಾಂಸ್ಕøತಿಕ ಆಚರಣೆಯ ಒಂದಾಗುವಿಕೆ ಏಕತೆಯ ಪಾಠ ತಿಳಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 17 ನೇ ವಾರ್ಡಿನಲ್ಲಿ ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ಭೂಮಿಕಾ ಹಾಗೂ ಪ್ಲಸ್ ಟು ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸಿದ ಲಿಖಿತ್ ಅವರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಸುಂದರ ಹೂ ರಂಗೋಲಿ ಬಿಡಿಸಿ ಸಿಹಿ ಹಂಚಲಾಯಿತು. ಅಧ್ಯಕ್ಷ ವಿನೋದ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹರ್ಷಿತ್ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ಬಿರ್ಮೂಲೆ ಸ್ವಾಗತಿಸಿದರು. ಗ್ರಂಥಾಲಯ ನಿರ್ವಾಹಕಿ ರೇಖಾ ವಂದಿಸಿದರು. ಸದಸ್ಯರು, ಸ್ಥಳೀಯರು ಭಾಗವಹಿಸಿದ್ದರು.
ನಲ್ಕ ಭಗತ್ ಸಿಂಗ್ ಗ್ರಂಥಾಲಯದ ಓಣಂ ಆಚರಣೆ: ಹಬ್ಬ ಸೌಹಾರ್ದತೆ ಬೆಳೆಸುವುದು: ಉದಯ ಸಾರಂಗ್
0
ಸೆಪ್ಟೆಂಬರ್ 11, 2022
Tags