ಪೆರ್ಲ:ಮಾತೃಭೂಮಿ ಸ್ವರ್ಗ ಇದರ ವತಿಯಿಂದ ನಾಡ ಹಬ್ಬ ಓಣಂ ಆಚರಣೆಯು ಸೆಪ್ಟೆಂಬರ್ 4 ಭಾನುವಾರ (ಇಂದು) ವಿವಿಧ ಕಾರ್ಯಕ್ರಮಗಳೊಂದಿಗೆ ಸ್ವರ್ಗ ಎಸ್.ವಿ.ಎ.ಯು.ಪಿ ಶಾಲೆಯಲ್ಲಿ ನಡೆಯಲಿದೆ.ಬೆಳಗ್ಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ರಾಮಚಂದ್ರ ಎಂ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಪಡ್ರೆ ಗ್ರಾಮಾಧಿಕಾರಿ ಶಂಕರ ಕುಂಜತ್ತೂರು ಉದ್ಘಾಟಿಸುವರು. ಪ್ರಧಾನ ಅಭ್ಯಾಗತರಾಗಿ ಪ್ರಗತಿ ಸ್ಪೆಷಲ್ ಶಾಲಾ ಶಿಕ್ಷಕಿ ರಮ್ಯಾ ಎನ್ ಭಾಗವಹಿಸಲಿದ್ದಾರೆ.ಸಭೆಯಲ್ಲಿ ಸ್ವರ್ಗ ಎಸ್.ವಿ.ಎ.ಯು.ಪಿ ಶಾಲಾ ಶಿಕ್ಷಕಿ ಗೀತಾಂಜಲಿ, ಮಾತೃಭೂಮಿ ಸ್ವರ್ಗದ ಅಧ್ಯಕ್ಷ ರವಿರಾಜ್ ಎಸ್ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಕಳೆದ ಸಾಲಿನ ಪ್ಲಸ್ ಟು ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಅಂಕ ಶ್ರೇಣಿಯಲ್ಲಿ ತೇರ್ಗಡೆಯಾದ ಧನುμï .ಪಿ ಪೆರಿಕ್ಕಾನ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ಓಣಂ ಹಬ್ಬದ ಆಚರಣೆಯ ಅಂಗವಾಗಿ ಅಂಗನವಾಡಿ ಮಕ್ಕಳಿಗೆ ಮಂಜೊಟ್ಟಿ ಕಾಯಿ ಹೆಕ್ಕುವುದು,ಓಟ ,ಸಂಗೀತ ಕುರ್ಚಿ ಸ್ವರ್ಧೆ ,ಶಾಲಾ ಮಕ್ಕಳಿಗೆ ಬಲೂನ್ ರೇಸ್,ಪೆÇಟೆಟೋ ರೇಸ್, ಸಂಗೀತ ಕುರ್ಚಿ, ಮಹಿಳೆಯರಿಗೆ ಸಂಗೀತ ಕುರ್ಚಿ, ಬಾಟಲಿಗೆ ನೀರು ತುಂಬಿಸುವುದು, ಗ್ಲಾಸ್ ಬ್ಯಾಲೆನ್ಸ್, ಡಾಜ್ ಬಾಲ್,ಪುರುಷರಿಗೆ ಬ್ರಿಕ್ಸ್ ವಾಕ್, ಗ್ಲಾಸ್ ಬ್ಯಾಲೆನ್ಸ್, ಬಲೂನ್ ಒಡೆಯುವುದು, ಲಗೋರಿ ಮುಂತಾದ ಸ್ಪರ್ಧೆಗಳು ನಡೆಯಲಿದೆ.
ಸ್ವರ್ಗ: ಮಾತೃಭೂಮಿ ಸಂಘಟನೆಯಿಂದ ನಾಡ ಹಬ್ಬ ಓಣಂ ಆಚರಣೆ ಇಂದು
0
ಸೆಪ್ಟೆಂಬರ್ 04, 2022