ಬದಿಯಡ್ಕ: ಮದ್ಯಪಾನದಂತಹ ಕೆಟ್ಟ ಹವ್ಯಾಸಗಳು ಮಾನವನನ್ನು ರಾಕ್ಷಸನನ್ನಾಗಿಸುತ್ತದೆ. ಕಳೆದುಹೋದ ಕೆಟ್ಟ ದಿನಗಳನ್ನು ಮರೆತು ನವಜೀವನವನ್ನು ಪ್ರಾರಂಭಿಸುವಂತೆ ಮಾಡುವ ಪ್ರಯತ್ನ ಈ ಶಿಬಿರ. ಗಾಳಿಯೂದಿದರೆ ಉಬ್ಬುವ ಬುಗ್ಗೆಗಳನ್ನು ಕಂಡು ಉತ್ಸಾಹದಿಂದ ನಲಿಯುವ ಮಕ್ಕಳಂತೆ ನೀವೂ ಇಲ್ಲಿ ನೀಡುವ ಸತ್ಕರ್ಮ, ಸತ್ಕಾರ್ಯದ ಪಾಠಗಳನ್ನು ಕಲಿತು ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಮನೆಯಲ್ಲಿ ಎಂದೂ ಸಂತೋಷ, ನೆಮ್ಮದಿ ತುಂಬುವಂತೆ ಮಾಡಬೇಕು ಎಂದು ಕೇರಳ ಸರಕಾರದ ಶ್ರೇಷ್ಠ ಅಧ್ಯಾಪಕ ಪ್ರಶಸ್ತಿ ಪುರಸ್ಕøತ ನಿರ್ಮಲ್ ಕುಮಾರ್ ಕಾರಡ್ಕ ಹೇಳಿದರು.
ಧ.ಗ್ರಾ. ಯೋಜನೆಯ ಆಶ್ರಯದಲ್ಲಿ ಸೌಪರ್ಣಿಕ ನವಜೀವನ ಸಮಿತಿ ಮತ್ತು ವಿವಿಧ ನವಜೀವನ ಸಮಿತಿಗಳ ಆಶ್ರಯದಲ್ಲಿ ಪೆರಡಾಲ ಶ್ರೀ ಉದನೇಶ್ವರ ಸಭಾ ಭವನದಲ್ಲಿ ನಡೆದ 1584ನೇ ಮದ್ಯವರ್ಜನ ಶಿಬಿರದಲ್ಲಿ ಗುಂಪು ಸಲಹೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮದ್ಯವರ್ಜನ ಶಿಬಿರದ ಅಧ್ಯಕ್ಷ ಜಯರಾಮ ಪಾಟಾಳಿ ಪಡುಮಲೆ, ಧ.ಗ್ರಾ. ಒಕ್ಕೂಟದ ಅಧ್ಯಕ್ಷರಾದ ತಾರಾನಾಥ ರೈ, ರೋಹಿತಾಕ್ಷ, ಧ.ಗ್ರಾ. ಯೋಜನಾಧಿಕಾರಿ ಮುಖೇಶ್, ಪ್ರಸಾದ್ ಬದಿಯಡ್ಕ, ಗಣೇಶ್ ಮತ್ತು ಮೇಲ್ವಿಚಾರಕರಾದ ದಿನೇಶ್ ಕೊಕ್ಕಡ, ಶಿಬಿರಾಧಿಕಾರಿ ದೇವಿ ಪ್ರಸಾದ್ ಸುವರ್ಣ, ಆರೋಗ್ಯಾಧಿಕಾರಿ ಪ್ರಸಿಲ್ಲ ಮುಂತಾದವರು ಉಪಸ್ಥಿತರಿದ್ದರು.
ಗುಂಪು ಸಲಹಾ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳ ಜತೆ ನಿರ್ಮಲ್ ಕುಮಾರ್
0
ಸೆಪ್ಟೆಂಬರ್ 21, 2022
Tags