ಬದಿಯಡ್ಕ: ಕೇರಳ ತುಳು ಅಕಾಡೆಮಿಗೆ ರಾಜ್ಯಸರ್ಕಾರದ ಕಾರ್ಯದರ್ಶಿಯಾಗಿ ನೇಮಕಗೊಂಡ ಸಹಕಾರಿ ಇಲಾಖೆಯ ಉಪನೊಂದಾವಣಾಧಿಕಾರಿ ರವೀಂದ್ರ ಆನೆಮಜಲು ಅವರನ್ನು ಅಂಬೇಡ್ಕರ್ ವಿಚಾರ ವೇದಿಕೆಯ ವತಿಯಿಂದ ಅಭಿನಂದಿಸಲಾಯಿತು.
ಬದಿಯಡ್ಕ ಸಂಸ್ಕøತಿ ಭವನದಲ್ಲಿ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿ, ಪತ್ರಕರ್ತ, ತುಳು ಅಕಾಡೆಮಿಯ ಮಾಜಿ ಸದಸ್ಯ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಶಾಲು ಹೊದೆಸಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಅಕಾಡೆಮಿಯ ನೂತನ ಸದಸ್ಯ, ರಂಗಕರ್ಮಿ ಉದಯ ಸಾರಂಗ್ ಅವರನ್ನೂ ಅಭಿನಂದಿಸಲಾಯಿತು. ಅಂಬೇಡ್ಕರ್ ವಿಚಾರವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ಅಭಿನಂದನಾ ಭಾಷಣ ಮಾಡಿದರು. ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಿ., ಸದಸ್ಯ ಶಂಕರ ಡಿ., ಪದ್ಮನಾಭ ಸಿ.ಎಚ್., ಸುನಂದಾ ಟೀಚರ್, ಕೃಷ್ಣ ದರ್ಭೆತ್ತಡ್ಕ, ನಿಟ್ಟೋಣಿ ಬಂದ್ಯೋಡು, ಶಶಿಕಲಾ ಟೀಚರ್, ದೀಕ್ಷಿತ್ ಧರ್ಮತ್ತಡ್ಕ, ಸೋಮಯ್ಯ, ವಿಜಯಕುಮಾರ್ ಬಾರಡ್ಕ, ಸಂದೀಪ್ ಬದಿಯಡ್ಕ ಶುಭ ಹಾರೈಸಿದರು. ಸುಂದರ ಬಾರಡ್ಕ ನಿರೂಪಿಸಿದರು.
ಅಂಬೇಡ್ಕರ್ ವಿಚಾರ ವೇದಿಕೆಯಿಂದ ಸನ್ಮಾನ ಕಾರ್ಯಕ್ರಮ
0
ಸೆಪ್ಟೆಂಬರ್ 08, 2022