ಕೊಚ್ಚಿ: ಕೇರಳದ ವಿವೇಕಾನಂದರೆಂದೇ ಕರೆಯಲ್ಪಡುವ ನವೋದಯ ವೀರ ಆಗಮಾನಂದ ಸ್ವಾಮಿಗಳ 125ನೇ ಜನ್ಮ ದಿನಾಚರಣೆಗೆ ಕಾಲಡಿ ಸಜ್ಜಾಗಿದೆ.
ನಾಳೆ( ಸೆ.13ರ ಮಂಗಳವಾರ) ಕಾಲಡಿ ಶ್ರೀ ರಾಮಕೃಷ್ಣ ಅದ್ವೈತ ಆಶ್ರಮದಲ್ಲಿ ನಡೆಯಲಿರುವ ಮಹೋತ್ಸವವನ್ನು ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಉದ್ಘಾಟಿಸಲಿದ್ದಾರೆ. ಅದ್ವೈತ ಆಶ್ರಮದ ಅಧ್ಯಕ್ಷ ಸ್ವಾಮಿ ಶ್ರೀ ವಿದ್ಯಾನಂದ ಅಧ್ಯಕ್ಷತೆ ವಹಿಸುವರು.
ತ್ರಿಶೂರ್ ಪುರಾಣಾಟುಕರ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ನಂದಾತ್ಮಜಾನಂದ ಪ್ರಧಾನ ಭಾಷಣ ಮಾಡಲಿದ್ದಾರೆ. ಸಮಾರಂಭದಲ್ಲಿ ಆಗಮಾನಂದ ಸ್ವಾಮಿಗಳ ಶಿಷ್ಯರಾದ ಪದ್ಮಶ್ರೀ ಎಂ.ಕೆ.ಕುಂಞನ್ ಮಾಸ್ತರ್, ಸ್ವಾಮಿ ಸ್ವಪ್ರಭಾನಂದ, ತಲನಾಡು ಚಂದ್ರಶೇಖರನ್ ನಾಯರ್ ಮತ್ತು ಪ್ರಾಧ್ಯಾಪಕ ಟಿ.ಎನ್.ಶಂಕರಪಿಳ್ಳ ಅವರನ್ನು ಸನ್ಮಾನಿಸಲಾಗುವುದು. ಅತ್ಯುತ್ತಮ ಸಂಸ್ಕøತ ಭಾμÁ ಪ್ರಚಾರಕ ಸ್ವಾಮಿ ಆಗಮಾನಂದ ಪ್ರಶಸ್ತಿಯನ್ನು ಡಾ.ಪಿ.ವಿ.ವಿಶ್ವನಾಥನ್ ನಂಬೂದಿರಿ ಅವರಿಗೆ ಪ್ರದಾನ ಮಾಡಲಾಗುವುದು. ಮಿಜೋರಾಂನ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್, ಆದಿಶಂಕರ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ವಕೀಲ ಕೆ.ಆನಂದ್ ಮತ್ತಿತರರು ಉಪಸ್ಥಿತರಿರುವರು.
ಆಗಮಾನಂದ ಸ್ವಾಮಿಗಳು ಕಾಲಡಿ ರಾಮಕೃಷ್ಣ- ಅದ್ವೈತ ಆಶ್ರಮದ ಸ್ಥಾಪಕರು. ಕೊಲ್ಲಂ ಜಿಲ್ಲೆಯ ಚವಾರದಲ್ಲಿ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರು ಹರಿಜನ ಪುನರುಜ್ಜೀವನಕ್ಕಾಗಿ ಮಾಡಿದ ಪ್ರಯತ್ನಗಳು ಸಮುದಾಯದಲ್ಲಿ ದೊಡ್ಡ ಪರಿಣಾಮಗಳನ್ನು ಸೃಷ್ಟಿಸಿದವು. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಸನಾತನ ಧರ್ಮ ವಿದ್ಯಾರ್ಥಿ ಸಮೂಹವನ್ನು ಕಟ್ಟಿ ಧರ್ಮ ಪ್ರಚಾರ ಆರಂಭಿಸಿದರು.
ಆಗಮಾನಂದ ಸ್ವಾಮಿಗಳ ಸೂಚನೆ ಮೇರೆಗೆ ಕೇರಳದ ದೇವಸ್ಥಾನಗಳಲ್ಲಿ ಹಬ್ಬ ಹರಿದಿನಗಳಂದು ಆಧ್ಯಾತ್ಮಿಕ ಪ್ರವಚನಗಳು ನಡೆಯುತ್ತಿದ್ದವು. ಆದಿಶಂಕರರ ಜನ್ಮಸ್ಥಳವಾದ ಕಾಲಡಿಗೆ ಭಾರತದ ಸಾಂಸ್ಕೃತಿಕ ಭೂಪಟದಲ್ಲಿ ಸರಿಯಾದ ಸ್ಥಾನವನ್ನು ನೀಡುವಲ್ಲಿ ಸ್ವಾಮಿಗಳ ಕಾರ್ಯ ಗಮನಾರ್ಹವಾಗಿದೆ.
ಶ್ರೀ ಶಂಕರ ಕಾಲೇಜು, ಬ್ರಹ್ಮಾನಂದೋದಯಂ ಶಾಲೆಗಳು ಮತ್ತು ಶ್ರೀ ರಾಮಕೃಷ್ಣ ಗುರುಕುಲಂ ಅನ್ನು ಆಗಮಾನಂದ ಸ್ವಾಮಿಗಳು ಸ್ಥಾಪಿಸಿದರು. ಸ್ವಾಮಿಯವರ ಪ್ರಯತ್ನದ ಫಲವಾಗಿ ಶ್ರೀ ಶಂಕರ ಸೇತುವೆ ಸಾಕಾರಗೊಂಡಿತು. ಅವರು ಶ್ರೀ ರಾಮಕೃಷ್ಣ ಮಿಷನ್‍ನ ಪ್ರಬುದ್ಧ ಕೇರಳಂ ಪತ್ರಿಕೆಯ ಸಂಪಾದಕರಾಗಿದ್ದರು. ಪ್ರಮುಖ ಕೃತಿಗಳೆಂದರೆ ವಿವೇಕಾನಂದ ಸಂದೇಶ, ಶ್ರೀ ಶಂಕರ ಭಗವದ್ಗೀತೆ ವ್ಯಾಖ್ಯಾನ ಮತ್ತು ವಿಷ್ಣು ಪುರಾಣ ತರ್ಜಮೆ. ಸ್ವಾಮಿ 1961 ರಲ್ಲಿ ಸಮಾಧಿ ಹೊಂದಿದರು.
ಕೇರದ ವಿವೇಕಾನಂದ, ಆಧುನಿಕ ಕಾಲಡಿಯ ಶಿಲ್ಪಿ ಆಗಮಾನಂದ ಸ್ವಾಮಿಯ ಜನ್ಮ ವಾರ್ಷಿಕೋತ್ಸವದ ಆಚರಣೆಗೆ ಸಿದ್ದಗೊಂಡ ಕಾಲಡಿ
0
ಸೆಪ್ಟೆಂಬರ್ 11, 2022
Tags